ಬೆಳ್ತಂಗಡಿ: ಮಹಾಶಿವರಾತ್ರಿ ಆಚರಣೆ ಎಲ್ಲಾ ಕಡೆಗಳಲ್ಲೂ ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತದೆ.ಕೆಲವು ಕಡೆಗಳಲ್ಲಿ ಒಬ್ಬರ ತೋಟದಿಂದ ಅಡಿಕೆ, ತೆಂಗಿನ ಕಾಯಿ ಇನ್ನೊಬ್ಬರ ಮನೆಯಲ್ಲಿ ಕೊಂಡೊಗಿ ಇಡುವಂತದು ಹಾಗೂ ಇನ್ನಿತರ ಕೆಲವೊಂದು ಕೀಟಲೆಗಳನ್ನು ತಮಾಷೆಗಾಗಿ ಮಾಡುವುದಿದೆ ಅದರೆ ಕೆಲವೊಂದು ಕಡೆಗಳಲ್ಲಿ ತಮಾಷೆಗಾಗಿ ಮಾಡುವ ಕೆಲಸಗಳು ಜೀವಕ್ಕೆ ಅಪಾಯ ತರುವಂತದ್ದಾಗಿರುತ್ತದೆ ರಸ್ತೆಗಳಿಗೆ ಕಲ್ಲನ್ನು ಇಡುವುದು ರಸ್ತೆಯಲ್ಲಿ ಗುಂಡಿ ತೋಡುವುದು ರಸ್ತೆಗಳಿಗೆ ಮರ ಕಡಿದು ಹಾಕುವುದು ರಾತ್ರಿ ಹೊತ್ತು ವಾಹನಗಳಿಗೆ ಕಲ್ಲು ಬಿಸಾಡುವಂತಹ ಅಪಾಯಕಾರಿ ಕೆಲಸಗಳು ನಡೆಯುತ್ತಿರುತ್ತದೆ.
ಇಂತಹದೇ ಒಂದು ಘಟನೆ ನಿನ್ನೆ ರಾತ್ರಿ ಧರ್ಮಸ್ಥಳ ನೇತ್ರಾವತಿ ಮುಂಡಾಜೆ ರಸ್ತೆಯಲ್ಲಿ ನಡೆದಿದೆ. ಅರಣ್ಯ ಇಲಾಖೆಯವರು ನೆರಳಿಗಾಗಿ ರಸ್ತೆ ಬದಿಯಲ್ಲಿ ನೆಟ್ಟಂತಹ ಮರಗಳನ್ನು ಯಾರೋ ಕಿಡಿಗೇಡಿಗಳು ರಸ್ತೆಗೆ ಅಲ್ಲಲ್ಲಿ ಮರಗಳನ್ನು ಕಡಿದು ಹಾಕಿದ್ದಾರೆ. ಅದಲ್ಲದೇ ಕಸ ಬಾಟಲಿಗಳನ್ನೂ ರಸ್ತೆಯಲ್ಲಿ ತಂದು ಹಾಕಿದ್ದಾರೆ ಇದರ ಅರಿವಿಲ್ಲದೆ ವಾಹನ ಸವಾರರು ವೇಗವಾಗಿ ಬಂದ್ದು ಅಪಾಯಕ್ಕೆ ಸಿಲುಕುತ್ತಾರೆ ಅದಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತಾಧಿಗಳೂ ಈ ರಸ್ತೆಯಲ್ಲಿ ಆಗಮಿಸುತ್ತಾರೆ ರಾತ್ರಿ ಹೊತ್ತು ಈ ರೀತಿ ಅರಿವಿಲ್ಲದೆ ಬರುವವರು ಸಂಕಷ್ಟಕಕ್ಕೆ ಒಳಗಾಗುತ್ತಾರೆ ಸುತ್ತಮುತ್ತ ಪರಿಸರದಲ್ಲಿ ರಾತ್ರಿ ಹೊತ್ತು ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೂ ಇಂತಹ ಕೃತ್ಯದಿಂದ ಜೀವಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ.
ಅದ್ದರಿಂದ ಇಂತಹ ಕೃತ್ಯ ಎಸಗುವವರು ದಯವಿಟ್ಟು ಯೋಚಿಸಬೇಕು ತಮಾಷೆಗಾಗಿ ನಡೆಯುವ ಇಂತಹ ವಿಕೃತಿ ಕಿಡಿಗೇಡಿ ಕೆಲಸಗಳು ಇನ್ನೊಬ್ಬರ ಜೀವಕ್ಕೆ ಅಪಾಯ ತಂದೊಡ್ಡದಿರಲಿ ಅದಲ್ಲದೇ ಇಂತಹ ಕೆಲಸಗಳು ಯಾರಿಗೂ ನೋವು ತರದಿರಲಿ ಎನ್ನುವುದೇ ನಮ್ಮ ಪ್ರಜಾಪ್ರಕಾಶ ತಂಡದ ಆಶಯ.