
ಬೆಳ್ತಂಗಡಿ: ಹಲವಾರೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ಸರಪಾಡಿ, ಫರಂಗಿಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ರೂ 11 ಲಕ್ಷ ರೂ ದೇಣಿಗೆಯನ್ನು ನೀಡಿದರು. ಕಳೆದ ಕೆಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ವಿವಿಧ ಸಮಾಜ ಮುಖಿ ಕಾರ್ಯಗಳಿಗೆ ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ಸಮಾಜಕ್ಕೊಂದಿಷ್ಟು ಎಂಬಂತೆ ತನ್ನ ದುಡಿತದ ಒಂದು ಪಾಲನ್ನು ನೀಡುತ್ತಾ ಬರುತ್ತಿರುವ ಇವರು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ತನ್ನ ಕಲ್ಪನೆಯಂತೆ ವಿಶೇಷ ರೀತಿಯಲ್ಲಿ ನಡೆಸಲು ಯೋಜನೆಗಳನ್ನು ರೂಪಿಸಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.ಯಕ್ಷಗಾನ ಕಲಾವಿದರ ಪಾಲಿಗೆ ಆಶಾಕಿರಣ ಯಕ್ಷಧ್ರುವ ಪಟ್ಲ ಪೌಂಡೇಶನ್ ಸಂಚಾಲಕರಾಗಿ ಈಗಾಗಲೇ 1 ಕೋಟಿ ರೂ ದೇಣಿಗೆಯನ್ನು ನೀಡಿ ಪೌಂಡೇಶನ್ ಮಾಡುತ್ತಿರುವ ಮಾದರಿ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ತನ್ನ ದಾಂಪತ್ಯ ಜೀವನದ 25 ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮವನ್ನು ಕಳೆಂಜ ನಂದ ಗೋಕುಲ ಗೋಶಾಲೆಯಲ್ಲಿ ಕುಟುಂಬಸ್ಥರೊಂದಿಗೆ ಸರಳವಾಗಿ ಆಚರಿಸಿ ಗೋವುಗಳಿಗೆ ಆಹಾರ ತಯಾರಿಕೆಗಾಗಿ ರೂ 2 ಲಕ್ಷ ಮೊತ್ತದ ಯಂತ್ರವನ್ನು ಗೋಶಾಲೆಗೆ ನೀಡಿ ಮಾದರಿಯಾಗಿದ್ದಾರೆ. ಸದಾ ಬಡವರ ಪರ ಮನ ಮಿಡಿಯುವ ಇವರ ಸಮಾಜ ಮುಖಿ ಕೆಲಸಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: