ಬೆಳ್ತಂಗಡಿ: ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮವನ್ನು ಗೋಶಾಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಉದ್ಯಮಿ ಶಶಿಧರ್ ಶೆಟ್ಟಿ ದಂಪತಿಗಳು ಮಾದರಿಯಾಗಿದ್ದಾರೆ. ಡಿ 07 ರಂದು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿರುವ ಸ್ವಾಮೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಪ್ರವರ್ತಿತ ನಂದಗೋಕುಲ ಗೋಶಾಲೆಗೆ ಪತ್ನಿ ಪ್ರಮೀಳಾ ಶಶಿಧರ್ ಶೆಟ್ಟಿ ಹಾಗೂ ಕುಟುಂಬಸ್ಥರ ಜೊತೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.
ಈ ವೇಳೆ ಸುಮಾರು ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಯಂತ್ರವನ್ನು ನೀಡುವುದಾಗಿ ಭರವಸೆ ನೀಡಿದರಲ್ಲದೇ ಮುಂದಿನ ಹತ್ತು ದಿನಗಳ ಒಳಗೆ ಮೆಷಿನ್ ತರಿಸುವ ಬಗ್ಗೆಯೂ ತಿಳಿಸಿದರು.
ಈ ವೇಳೆ ಮಾತನಾಡಿದ ಶಶಿಧರ್ ಶೆಟ್ಟಿಯವರು ಗೋಶಾಲೆಯ ಕೆಲವೊಂದು ಸಮಸ್ಯೆಗಳ ಬಗ್ಗೆ ಟ್ರಸ್ಟ್ ನವರು ನನ್ನ ಗಮನಕ್ಕೆ ತಂದಾಗ ಪ್ರಮುಖವಾಗಿ ಗೋವುಗಳಿಗೆ ಅಡಿಕೆ ಹಾಳೆ ಅತ್ಯುತ್ತಮ ಆಹಾರವಾಗಿದ್ದು ಇದನ್ನು ಹುಡಿ ಮಾಡುವ ಯಂತ್ರದ ಅವಶ್ಯಕತೆ ಇದ್ದು ಇದಕ್ಕೆ ಸುಮಾರು 1.50 ಲಕ್ಷ ರೂ ಅವಶ್ಯಕತೆ ಇದೆ ಒಂದು ವೇಳೆ ಅಂತಹ ಮೆಷಿನ್ ಇದ್ದಲ್ಲಿ ತಿಂಗಳಲ್ಲಿ ಸುಮಾರು 50 ಸಾವಿರದಷ್ಟು ಖರ್ಚಿನ ಹೊರೆ ಕಡಿಮೆಯಾಗಲಿದೆ ಎಂಬ ಮಾಹಿತಿಯಂತೆ ಸಂತೋಷದಿಂದ ಒಪ್ಪಿ ಮೆಷಿನ್ ಖರೀದಿಯ ಬಗ್ಗೆ ತಿಳಿಸಿದ್ದೇನೆ.
ಅದಲ್ಲದೇ ಮುಂದಿನ ದಿನಗಳಲ್ಲಿ ಗೋ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು ಮಾದರಿ ರೀತಿಯಲ್ಲಿ ಈ ಗೋ ಶಾಲೆ ಮುನ್ನಡೆಯುವ ನಿಟ್ಟಿನಲ್ಲಿ ಸದಾ ಪ್ರೋತ್ಸಾಹ ನೀಡಲಿದ್ದೇನೆ ಎಂದರು. ಮುಂಬರುವ ಗೋಕುಲದ ದೀಪೋತ್ಸವ ಕಾರ್ಯಕ್ರಮಕ್ಕೂ ತನ್ನಿಂದಾಗುವ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗೋಶಾಲೆಯ ವತಿಯಿಂದ ಶಶಿಧರ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಈ ವೇಳೆ ಟ್ರಸ್ಟ್ ಅಧ್ಯಕ್ಷ ಡಾ. ದಯಾಕರ್ , ಕಾರ್ಯದರ್ಶಿ ಸುಬ್ರಹ್ಮಣ್ಯ ಅಗರ್ತ, ಟ್ರಸ್ಟಿಗಳಾದ ರಮೇಶ್ ಪ್ರಭು, ಭಾಸ್ಕರ ಧರ್ಮಸ್ಥಳ, ದೀಪೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಕೊಳಂಬೆ,ಗಣೇಶ್ ಉಜಿರೆ, ಆದರ್ಶ್, ಶಶಿಧರ್ ಶೆಟ್ಟಿ ಕುಟುಂಬಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಟ್ರಸ್ಟಿ ನವೀನ್ ನೆರಿಯ ಸ್ವಾಗತಿಸಿ ಧನ್ಯವಾದವಿತ್ತರು.
ಇದನ್ನೂ ಓದಿ: