ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಅಶ್ವಥನಗರ ನಿವಾಸಿ ಸುರೇಶ್ ಚೌಟ ಮತ್ತು ಭಾರತಿ ದಂಪತಿಗಳ ಪುತ್ರ ಸುಪ್ರೀತ್ ಎಸ್. ಚೌಟ ಗೇರುಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ 8 ನೇ ತರಗತಿಯಲ್ಲಿ ಕಲಿಯುತಿದ್ದು ಲಾಕ್ ಡೌನ್ ನಂತರ ಪ್ರಾರಂಭವಾದ ಶಾಲೆಗೆ ಸೈಕಲ್ ನಲ್ಲಿ ತೆರಳುತಿದ್ದಾಗ ಇದ್ದಕ್ಕಿದಂತೆ ಕಾಲು ನೋವು ಕಾಡಿತ್ತು ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಕಾಲಿನಲ್ಲಿ ಎಲುಬಿನ ಕ್ಯಾನ್ಸರ್ ಪತ್ತೆಯಾಗಿತ್ತು. ಚಿಕಿತ್ಸೆಗೆ 13 ಲಕ್ಷ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ ಮೊದಲೇ ಅರ್ಥಿಕವಾಗಿ ಕಡುಬಡತನದಲ್ಲಿ ಇರುವ ಕುಟುಂಬ ಇದರಿಂದ ಚಿಂತೆಗೊಳಗಾಗಿತ್ತು ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಅವರ ಸ್ಥಿತಿಯ ಬಗ್ಗೆ ಆರ್ಥಿಕ ಸಹಾಯಹಸ್ತ ನೀಡುವಂತೆ ವರದಿ ಪ್ರಕಟಮಾಡಿತ್ತು.
ಈ ಬಗ್ಗೆ ಹುಡುಗನ ಮಾಹಿತಿಯನ್ನು ಪಡೆದುಕೊಂಡ ಉದ್ಯಮಿ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ರೂ 1 ಲಕ್ಷ ಆರ್ಥಿಕ ಸಹಾಯವನ್ನು ನೀಡಿ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಅಜಿತ್ ಶೆಟ್ಟಿ ಕೊರ್ಯರ್ ,ರಾಜೇಶ್ ಶೆಟ್ಟಿ, ನವಶಕ್ತಿ ಗುರುವಾಯನಕೆರೆ, ಶಶಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಈಗಾಗಲೇ ಅರ್ಥಿಕವಾಗಿ ಹಲವಾರು ಮಂದಿಗೆ ಸಹಾಯ ಹಸ್ತ ಚಾಚಿರುವ ಇವರ ಇಂತಹ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: