ಕುಪ್ಪೆಟ್ಟಿ: ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ ಯೋಧರಿಗೆ ನುಡಿನಮನ ಕಾರ್ಯಕ್ರಮ ಶ್ರೀ ಗಣೇಶ ಭಜನಾ ಮಂದಿರದ ವತಿಯಿಂದ ನಡೆಯಿತು..
ಬಿಪಿನ್ ರಾವತ್ ಮತ್ತು ನಿಧನ ಹೊಂದಿದ ಇತರ ಯೋಧರುಗಳಿಗೆ ಉಪನ್ಯಾಸಕ ಸುಧೀರ್ ಕೆ. ಎನ್., ಹಲೇಜಿ ನುಡಿನಮನ ಸಲ್ಲಿಸಿದರು.
ಗ್ರಾಮಪಂಚಾಯತ್ ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ, ತಣ್ಣೀರುಪಂತ ಮಹಮ್ಮಾಯಿ ದೇವಸ್ಥಾನದ ಅರ್ಚಕ ಪ್ರಸನ್ನ ಮುಚ್ಚಿನ್ನಾಯ, ತಣ್ಣೀರುಪಂತ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ರೋಹಿತ್ ಶೆಟ್ಟಿ, ಸುಂದರ ಗೌಡ ಬೆಂಗಾಯಿ, ಉದ್ಯಮಿ ಸುನೀಲ್ ಅನವು, ಸುರೇಶ್. ಹೆಚ್.ಎಲ್ ಉಪಸ್ಥಿತರಿದ್ದರು. ರವಿಪ್ರಕಾಶ್ ವಾದ್ಯಕೋಡಿ ಕಾರ್ಯಕ್ರಮ ನಿರ್ವಹಿಸಿದರು.