ಇಂದಿನಿಂದ ಉದ್ಯಾನ ನಗರಿಯಲ್ಲಿ‌ ಕಬಡ್ಡಿ ‌ಹಬ್ಬ: ಪ್ರೋ ಕಬಡ್ಡಿ ಲೀಗ್ ಸೀಸನ್ 8 ಪ್ರೇಕ್ಷಕರಿಲ್ಲದೆ ಇಂದಿನಿಂದ ಆರಂಭ: 12 ಬಲಿಷ್ಠ ತಂಡಗಳಿಂದ ಪ್ರಶಸ್ತಿಗಾಗಿ ಕಾದಾಟ: ಬೆಂಗಳೂರು ಬುಲ್ಸ್, ಯು ಮುಂಬಾ ನಡುವೆ ಪ್ರಥಮ ಪಂದ್ಯ

 

 

ಬೆಂಗಳೂರು: ಬರೋಬ್ಬರಿ 20 ತಿಂಗಳ ನಂತರ ಪ್ರೊ ಕಬಡ್ಡಿಯ ಮತ್ತೊಂದು ಆವೃತ್ತಿಯ ಪಂದ್ಯಗಳು ಬುಧವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಕಬಡ್ಡಿ ಅಭಿಮಾನಿಗಳು, ಕ್ರೀಡಾ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಸಿಲಿಕಾನ್ ‌ಸಿಟಿಯಲ್ಲಿ‌ ಪಂದ್ಯಗಳು:
ಉದ್ಯಾನ ನಗರಿ ಬೆಂಗಳೂರಿನ ಶೆರಾಟನ್ ಗ್ರ್ಯಾಂಡ್ ಬೆಂಗಳೂರು ವೈಟ್‌ಫೀಲ್ಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನ ಸುರಕ್ಷಿತ ಬಯೋ ಬಬಲ್‌ ವಲಯದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ.
ಬೆಂಗಳೂರು ಬುಲ್ಸ್, ಯು ಮುಂಬಾ ನಡುವೆ ಪ್ರಥಮ ಕಾದಾಟ ನಡೆಯಲಿದೆ. ಬೆಂಗಳೂರು ಬುಲ್ಸ್ ತಂಡ ಪವನ್ ಕುಮಾರ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್, ಮಹೇಂದರ್ ಸಿಂಗ್, ಸೌರಭ್ ನಂದಲ್, ಅಮಿತ್ ಶೆರಾನ್, ಅಂಕಿತ್ ಮೊದಲಾದ ‌ಆಟಗಾರರನ್ನು ಒಳಗೊಂಡಿದೆ. ‌ಯು ಮುಂಬಾ ತಂಡದಲ್ಲಿ ಅಭಿಷೇಕ್ ಸಿಂಗ್, ವಿ ಅಜಿತ್ ಕುಮಾರ್, ಅಜಿಂಕ್ಯ ಕಪ್ರೆ, ಪಂಕಜ್, ಫಝಲ್ ಅತ್ರಾಚಲಿ, ಸುನಿಲ್ ಸಿದ್ಧಗವಲಿ, ಹರೇಂದರ್ ಕುಮಾರ್ ಇದ್ದಾರೆ‌.
ಪಂದ್ಯಾವಳಿಗಳು ಕುತೂಹಲ ‌ಮೂಡಿಸಿವೆ.

error: Content is protected !!