ಕೀರ್ತಿಶೇಷ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೆಸರಿನ ಚೊಚ್ಚಲ ಪ್ರಶಸ್ತಿ ಪ್ರದಾನ: ಯಕ್ಷಗಾನ ಕ್ಷೇತ್ರದ ವಿಶೇಷ ಸಾಧನೆಗಾಗಿ ಹರ್ಷೇಂದ್ರ ಕುಮಾರ್ ಅವರಿಗೆ ಪ್ರಶಸ್ತಿ

ಧರ್ಮಸ್ಥಳ: ಯಕ್ಷಗಾನ ಕ್ಷೇತ್ರದ ವಿಶೇಷ ಸಾಧನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.‌ ಹರ್ಷೇಂದ್ರ ಕುಮಾರ್ ಅವರಿಗೆ ಎಡನೀರು ಮಠದ ಕೀರ್ತಿಶೇಷ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಹೆಸರಿನಲ್ಲಿ ‌ನೀಡುವ ಚೊಚ್ಚಲ ಪ್ರಶಸ್ತಿಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರದಾನ‌ ಮಾಡಲಾಯಿತು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಕಲಾ ಪೋಷಕ ಟಿ. ಶಾಮ್ ಭಟ್ ಮೊದಲಾದವರು ಪ್ರಶಸ್ತಿ ನೀಡಿ ಗೌರವಿಸಿದರು.                                                                                                      ಮಾ. 6ರಂದು ಸುಳ್ಯ ತಾಲೂಕು ಕಲ್ಲುಗುಂಡಿಯಲ್ಲಿ ಡಾ. ಕೀಲಾರುಗೋಪಾಲಕೃಷ್ಣ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಂಪಾಜೆ ಯಕ್ಷೋತ್ಸವದಲ್ಲಿ ಗೌರವಿಸಲಾಯಿತು.

ಭಾರತ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (ನ್ಯಾಯಾಂಗ), ಬೆಂಗಳೂರಿನ ಡಾ. ವಿದ್ಯಾಭೂಷಣ(ಸಂಗೀತ) ಹಾಗು ಸುಳ್ಯದ ಡಾ. ರೇಣುಕಾ ಪ್ರಸಾದ್(ಶಿಕ್ಷಣ)‌ ಅವರನ್ನೂ ಪ್ರಶಸ್ತಿ‌ ನೀಡಿ ಪುರಸ್ಕಾರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಕೀಲಾರು ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ್ ಭಟ್, ಕಾರ್ಯದರ್ಶಿ ಸುಮನಾ ಶಾಮ್ ಭಟ್ , ಮುರಳೀಧರ ಕೀಲಾರು, ನಿರ್ದೇಶಕ ಸುಬ್ರಹ್ಮಣ್ಯ ಉಪಾಧ್ಯಾಯ, ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮೊದಲಾದವರು ಉಪಸ್ಥಿತರಿದ್ದರು.

error: Content is protected !!