ಧರ್ಮಸ್ಥಳ: ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಶ್ರೀಗಳವರ ಪ್ರಥಮ ಪುಣ್ಯಸ್ಮೃತಿ ಪ್ರಯುಕ್ತ ನಾಲ್ವರು ಸಾಧಕರಿಗೆ ಕೇಶವಾನಂದ ಭಾರತಿ ಪ್ರಶಸ್ತಿಗಳನ್ನು ಮಾ 6. ರಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸುಳ್ಯ ತಾಲೂಕು ಸಂಪಾಜೆಯ ಡಾ! ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿರುವ “ಸಂಪಾಜೆ ಯಕ್ಷೋತ್ಸವ” ದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ .ಹರ್ಷೇಂದ್ರ ಕುಮಾರ್ (ಯಕ್ಷಗಾನ), ಭಾರತ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (ನ್ಯಾಯಾಂಗ ), ಬೆಂಗಳೂರಿನ ಡಾ. ವಿದ್ಯಾಭೂಷಣ(ಸಂಗೀತ) ಹಾಗೂ ಸುಳ್ಯದ ಡಾ. ರೇಣುಕಾಪ್ರಸಾದ್ ಕೆ.ವಿ. (ಶಿಕ್ಷಣ) ಅವರಿಗೆ ಅವರು ನಾಡು ನುಡಿಗೆ ಸಲ್ಲಿಸಿದ ಅಮೋಘ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶ್ರೀ ಎಡನೀರು ಮಠದ ಪ್ರಕಟಣೆ ತಿಳಿಸಿದೆ.