ಇಳಂತಿಲ ಗ್ರಾಮದ ನಿವೃತ ಯೋಧನಿಗೆ ಸಾರ್ವಜನಿಕರಿಂದ ಆತ್ಮೀಯ ಸ್ವಾಗತ

ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ 20 ವರ್ಷ ಮೀರತ್,ಜಮ್ಮು ಕಾಶ್ಮೀರ, ನಾಗಾಲ್ಯಾಂಡ್,ಪಶ್ಚಿಮ ಬಂಗಾಳ, ಲಡಾಖ್ ಹಾಗೂ ಉತ್ತರಾಖಂಡದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತಿ ಹೊಂದಿ ತಾಯ್ನಾಡಿಗೆ ಮರಳಿದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಉಳಿಯ ಪುರಂದರ ಗೌಡ ಅವರನ್ನು ಸೌಹಾರ್ದ ಸಮಿತಿ, ಇಳಂತಿಲ ಇದರ ವತಿಯಿಂದ ಮಾ 04 ರಂದು ಉಪ್ಪಿನಂಗಡಿಯ ಎಚ್.ಎಂ ಹಾಲ್ ಬಳಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಬೆಳಿಗ್ಗೆ 9.30 ಕ್ಕೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮವನ್ನು ಪ್ರವೇಶಿಸಿದ ಅವರನ್ನು ಅಭಿಮಾನಿಗಳು ಹಾರ ಹಾಕಿ ಬರಮಾಡಿಕೊಂಡರು. ಸೌಹರ್ದ ಸಮಿತಿ ವತಿಯಿಂದ ಮಾಜಿ ತಾ.ಪಂ.ಸದಸ್ಯ, ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಮಾಹಿಲ್ತೊಡಿ ಈಶ್ವರ ಭಟ್ ಶಾಲು ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪುರಂದರ ಗೌಡರ ಪತ್ನಿ ವಿಶ್ವಲತಾ ರವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಣಿಯೂರು ಜಿ.ಪಂ.ಸದಸ್ಯ ಕೆ.ಕೆ.ಶಾಹುಲ್ ಹಮೀದ್, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ|| ರಾಜರಾಮ ಕೆ.ಬಿ, ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ನ್ಯಾಯಾವಾದಿ ಮನೋಹರ ಕುಮಾರ್, ಇಳಂತಿಲ ಗ್ರಾ.ಪಂ.ಸದಸ್ಯ ಯು.ಕೆ ಇಸುಬು, ತಣ್ಣೀರು ಪಂಥ ಗ್ರಾ.ಪಂ. ಉಪಾಧ್ಯಕ್ಷ ಆಯೂಬ್ ಡಿ.ಕೆ, ಮಾಜಿ ಅಧ್ಯಕ್ಷ ಜಯವಿಕ್ರಂ, ಶ್ರೀಮತಿ ಉಮಾವತಿ, ಚಂದ್ರಶೇಖರ ಉಳಿಯ, ಸೇಸಪ್ಪ ಗೌಡ ತಾರಿದಡಿ, ಜೋಸೆಫ್ ಡಿ ಸೋಜಾ, ಜನಾರ್ದನ ಪೂಜಾರಿ, ಫಯಾಜ್ ಅಹಮ್ಮದ್, ನಾರಯಣ ಗೌಡ, ಅಶ್ವೀರ್ ಯು.ಟಿ, ಜನಾರ್ದನ ಅಮ್ಟಂಗೆ, ಶ್ರೀನಿವಾಸ ಗೌಡ ಪರನೀರು ಮತ್ತು ಜನಾರ್ದನ ಗೌಡ, ಕುಪ್ಪಿಗುಂಡಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!