ಲಸಿಕೆಯಿಂದ ಕೊರೋನಾ ಆತಂಕ ದೂರ: ತಹಶೀಲ್ದಾರ್ ಮಹೇಶ್: ಕೊರೋನಾ ಲಸಿಕೆ ಶಿಬಿರಕ್ಕೆ ಚಾಲನೆ

ಬೆಳ್ತಂಗಡಿ: ಕೊರೋನಾ ಕುರಿತು ಸಾರ್ವಜನಿಕರು ಆತಂಕ ಎದುರಿಸುವ ದಿನ ಇತ್ತು. ಇವತ್ತು ವಾಕ್ಸಿನ್ ಬಂದಿದೆ. ಫ್ರಂಟ್ ಲೈನ್ ನೌಕರರಿಗೆ ಇದೀಗ ಲಸಿಕೆ ನೀಡಲಾಗುತ್ತದೆ. ಎಲ್ಲರಿಗೂ ಮುಂದಿನ ಹಂತದಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಸಂದರ್ಭ ನಾವೆಲ್ಲ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದೇವೆ. ಪೌರ ಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆ, ಸಂಘ ಸಂಸ್ಥೆಗಳ ಸದಸ್ಯರು ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ಸರಕಾರದ ನಿಯಮದಂತೆ ಲಸಿಕೆ ಪಡೆಯಬೇಕಿದೆ ಎಂದು‌ ತಹಸೀಲ್ದಾರ್ ಮಹೇಶ್ ಜೆ. ಹೇಳಿದರು.

ಅವರು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕೊರೋನಾ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿ‌ ಮಾತನಾಡಿದರು.
ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ 200 ಮಂದು ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ.

ಧರ್ಮಸ್ಥಳ ಪ್ರಾ.ಆ.ಕೇಂದ್ರದಲ್ಲಿ 70 ಮಂದಿ‌ ಸಿಬ್ಬಂದಿ ಹಾಗೂ ವೇಣೂರು ಪ್ರಾ.ಆ.ಕೇಂದ್ರದಲ್ಲಿ 200 ಮಂದಿಗೆ ಲಸಿಕೆ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ತಾ.ಪಂ. ಇಒ ಕುಸುಮಾಧರ್, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಸುಧಾಕರ್ ಎಂ.ಎಂ., ತಾಲೂಕು ಆಡಳಿತ ಅಧಿಕಾರಿ ಡಾ. ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿದ್ಯಾವತಿ, ನೋಡೆಲ್ ಅಧಿಕಾರಿಗಳಾದ
ಅಳದಂಗಡಿ ಪ್ರಾ.ಆ.ಕೇಂದ್ರ ಆಡಳಿತ ವೈದಾಧಿಕಾರಿ ಡಾ.ಚೈತ್ರಾ, ಮುಂಡಾಜೆ ಪ್ರಾ.ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಕಾವ್ಯ ಮೊದಲಾದವರು ‌ಉಪಸ್ಥಿತರಿದ್ದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜಯ್ ಕಲ್ಲೇಗ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!