ಪುಂಜಾಲಕಟ್ಟೆ: ಬಜೆಟ್ ವಿಶ್ಲೇಷಣೆ

ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ವಾಣಿಜ್ಯಶಾಸ್ತ್ರ ಸಂಘದ ವತಿಯಿಂದ ‘ಎ ಪಾನೆಲ್ ಡಿಸ್ಕಸನ್ ಆನ್ ಆನ್ಯುವಲ್ ಬಡ್ಜೆಟ್ 2021-22’ ಅನ್ನು ಹಮ್ಮಿಕೊಳ್ಳಲಾಯಿತು.

ವಿದ್ಯಾರ್ಥಿಗಳಾದ ಶಮೀರ್, ರಾಜೇಶ್ವರಿ, ಕೌಶಿಕ್, ಭಾವನಾ, ರಝೀನ, ನವೀನ್ ನಾಯ್ಕ, ಸುಷ್ಮಾ, ಚೈತನ್ಯ, ಚೈತನ್ಯ ಎನ್.ಎನ್. ಸುಪ್ರಿತಾ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ವಾರ್ಷಿಕ ಬಜೆಟ್ ನ್ನು ವಿಶ್ಲೇಷಿಸಿದರು.

ಕಾರ್ಯಕ್ರಮದ ಮಾಡರೇಟರ್ ಡಾ. ವಿಶಾಲ್ ಪಿಂಟೋ ಬಜೆಟ್‌ನ ಮುಖ್ಯ ಅಂಶಗಳನ್ನು ಚರ್ಚಿಸಿದರು.

ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ ಶುಭಕೋರಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್, ಸಹಾಯಕ ಪ್ರಾಧ್ಯಾಪಕ ಪ್ರೊ.ದೀಕ್ಷಿತ, ಪ್ರೊ.ರಾಜೇಶ್ವರಿ ಹಾಗೂ ಪ್ರೊ.ಆಂಜನೇಯ, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಿ.ಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶ್ವೇತಾ ಸ್ವಾಗತಿಸಿ, ರೂಪಾ ನಿರೂಪಿಸಿದರು. ಅಮೃತಾ ವಂದಿಸಿದರು.

error: Content is protected !!