ಬೆಳಾಲು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳು ಎಲ್ಲರಿಗೂ ಸಮಾನವಾಗಿದೆ. ಅದನ್ನು ಬಳಸಿಕೊಂಡು ಜೀವನದಲಯ ಯಶಸ್ಸು ಸಾಧಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಮ್ಮ ಸಾಮರ್ಥ್ಯ ಮತ್ತು ಅಭಿರುಚಿಗಳನ್ನು ಗುರುತಿಸಿಕೊಳ್ಳುವುದು ಅತಿ ಮುಖ್ಯ ಎಂದು ವಕೀಲರು ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ. ಬಿ. ಕೆ. ಧನಂಜಯ ರಾವ್ ಹೇಳಿದರು.
ಅವರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಇಂಟರಾಕ್ಟ್ ಕ್ಲಬ್ ನಂತಹ ಸಂಸ್ಥೆಯಿಂದ ಅವಕಾಶ ಗುರುತಿಸಿಕೊಳ್ಳಲು, ಪ್ರೇರಣೆ ಮತ್ತು ಮಾರ್ಗದರ್ಶನ ಪಡೆದುಕೊಳ್ಳಬಹುದು ಎಂದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಬೆಳ್ತಂಗಡಿ ರೋಟರಿ ಕ್ರಬ್ ಕಾರ್ಯದರ್ಶಿ ರೊ.ಶ್ರೀಧರ್ ಕೆ. ವಿ. ಮತ್ತು ಇಂಟರಾಕ್ಟ್ ಕ್ಲಬ್ ಗಳ ನಿರ್ದೇಶಕರಾದ ರೊ.ಅಬೂಬಕರ್ ಉಜಿರೆ ಉಪಸ್ಥಿತರಿದ್ದರು. ಆರಂಭದಲ್ಲಿ ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾದ ಒಂಭತ್ತನೇ ತರಗತಿಯ ಕು.ಪಲ್ಲವಿಯವರಿಗೆ ಮತ್ತು ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಶಿಕ್ಷಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು. ಒಂಬತ್ತನೇ ತರಗತಿಯ ವಿದ್ಯಾರ್ಥಿ ಶೋಭಿತ್ ಸ್ವಾಗತಿಸಿ , ಮೋಕ್ಷಿತ್ ವಂದಿಸಿದರು. ರಂಝಿಯಾ ಬಾನು ನಿರೂಪಿಸಿದರು.