ಬೆಳ್ತಂಗಡಿ: ಕಳೆದ 25 ವರುಷಗಳ ಹಿಂದೆ ನಡೆದ ಆಯತಾ ಚಂಡಿಕಾ ಯಾಗದ ನೆನಪಿಗಾಗಿ ಕೊಪ್ಪ ದಿ!ಬಾಲಗೋಪಾಲ ಜೋಯಿಸರ ಶಿಷ್ಯರಾದ ಬಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಚಂಡಿಕಾಯಾಗವು ಇತಿಹಾಸ ಪ್ರಸಿದ್ಥ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು. 25 ವರುಷಗಳ ಹಿಂದೆ ಕೊಪ್ಪ ಬಾಲಗೋಪಾಲ ಜೋಯಿಸರ ನೇತೃತ್ವದಲ್ಲಿ ನಡೆದಿದ್ದ ಈ ಯಾಗವು ದೇಶದಾದ್ಯಂತ ಹೆಸರುವಾಸಿಯಾಗಿತ್ತು ಈ ನೆನಪಿಗಾಗಿ ಅವರ ಶಿಷ್ಯರಾದ ಬಾನು ಪ್ರಕಾಶ್ ಶರ್ಮ ಹಾಗೂ ಇತರ ಶಿಷ್ಯ ವೃಂದದವರಿಂದ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಚಂಡಿಕಾಯಾಗವು ನಡೆಯಿತು.
ಈ ಸಂದರ್ಭದಲ್ಲಿ ಮುಳಬಾಗಿಲು ತೀರ್ಥಹಳ್ಳಿ ಶಾಖಾಮಠದ ಕೃಷ್ಣಾನಂದ ಸ್ವಾಮೀಜಿ, ಆಗಿನ ಆಯತಾಚಂಡಿಕಾ ಯಾಗದ ಕೆಲವು ಪದಾಧಿಕಾರಿಗಳು ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.