ಬೆಳಾಲು: ಮಾಯಾ ಶ್ರೀಮಹೇಶ್ವರ ಭಜನಾ ಮಂಡಳಿ ಬೆಳಾಲು ವತಿಯಿಂದ ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ನಾಲ್ಕನೇ ದಿನದ ಸಂಸ್ಕಾರ ಶಿಬಿರ ನಡೆಯಿತು.
ಸಂಪನ್ಮೂಲ ವ್ಯಕ್ತಿ ವಾಣಿ ಶಾಲೆ ಶಿಕ್ಷಕಿ ಮತ್ತು ಬೆಳಾಲು ಗ್ರಾ.ಪಂ. ಸದಸ್ಯೆ ವಿದ್ಯಾ ಶ್ರೀನಿವಾಸ ಗೌಡ ಅವರು ಪರಿಸರ ಸಂರಕ್ಷಣೆ ಮತ್ತು ಶುಚಿತ್ವದ ಮಹತ್ವವನ್ನು ತಿಳಿಸಿ, ಮಕ್ಕಳಿಗೆ ಸುಂದರವಾದ ಪರಿಸರ ಗೀತೆಯನ್ನು ಹಾಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಭಟ್ ಬೆಳಾಲು, ಲಕ್ಷ್ಮಣ ಗೌಡ ಪುಳಿತ್ತಡಿ, ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು ಹಾಗೂ ಜನಾರ್ದನ ಪೂಜಾರಿ ಪಿಲತ್ತಡಿ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು.
ಧ್ಯಾನ, ಪ್ರಾಣಾಯಾಮ, ಯೋಗ, ಭಜನೆ, ಭಗವದ್ಗೀತೆ ಪಠಣ, ಕಥಾ ವಾಚನ ಮುಂತಾದ ಚಟುವಟಿಕೆಗಳೊಂದಿಗೆ ನಡೆದ ಶಿಬಿರದಲ್ಲಿ ವಿಶೇಷವಾಗಿ ಮನೆ ಮತ್ತು ಪರಿಸರ ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು.
ಸುಮಾರು ನೂರಹತ್ತು ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ವಸಂತ ಪಲ್ಲಿದಡ್ಕ ಮತ್ತು ಭವಾನಿ ಮಾರ್ಪಾಲು ಅವರು ಶಿಬಿರಾರ್ಥಿಗಳಿಗೆ ಉಪಹಾರ ಹಾಗೂ ಪಾನೀಯ ವ್ಯವಸ್ಥೆ
ಮಾಡಿದ್ದರು. ಭಜನಾ ಮಂಡಳಿಯ ಸರ್ವ ಸದಸ್ಯರು ಸಹಕರಿಸಿದರು.