ವಿಧಾನಸಭೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ವಿರುದ್ಧ ಹರೀಶ್ ಪೂಂಜ ಕಿಡಿನುಡಿ: ಮುಜರಾಯಿ‌ ಇಲಾಖೆಯಲ್ಲಿ ಖಾಸಗಿ ದೇವಸ್ಥಾನ ನೋಂದಣಿ‌ ಮಾಡಿದ್ದಕ್ಕೆ ಆಕ್ರೋಶ

ಬೆಂಗಳೂರು: ವಿಧಾನಸಭೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ವಿರುದ್ಧ ಶಾಸಕ ಹರೀಶ್ ಪೂಂಜ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ‌ ಸಂದರ್ಭ ತಮ್ಮ ಸರ್ಕಾರದ ಅವಧಿಯಲ್ಲಿ ಹಿಂದೂ ವಿರೋಧಿ ನೀತಿ ಜಾರಿಗೆ ತಂದಿದ್ದರು ಎಂದು ಹರೀಶ್ ಪೂಂಜ ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವಂದನಾ ನಿರ್ಣಯ ಸಂದರ್ಭ ಮಾತನಾಡಿದ ಹರೀಶ್ ಪೂಂಜ, ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಖಾಸಗಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದೆ. ಈ ಮೂಲಕ ಖಾಸಗಿ ದೇಗುಲಗಳನ್ನು ಸರ್ಕಾರದ ಸುರ್ಪದಿಗೆ ತೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಮೂಲಕ‌ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದರು.‌ ಆದರೆ ಬಿ.ಎಸ್. ಯಡಿಯೂರಪ್ಪ ಅವರು ಸರಕಾರ ಹಿಂದೂ ಪರವಾಗಿದೆ ಎಂದರು. ಹರೀಶ್ ಪೂಂಜ ಹೇಳಿಕೆಗೆ‌ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಭೀಮಾನಾಯ್ಕ್ ಆಕ್ಷೇಪ ವ್ಯಕ್ತಪಡಿಸಿ, ನಾವೂ ಹಿಂದೂಗಳು. ಹಿಂದೂ ವಿರೋಧಿ ನೀತಿ ಎಂಬ ಪದವನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು.

error: Content is protected !!