ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

ಬೆಳ್ತಂಗಡಿ: ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ ಬುಧವಾರ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.

ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಹಾಗೂ ಗಂಧ, ಚಂದನ, ಕಲ್ಕಚೂರ್ಣ, ಶ್ರೀಗಂಧ, ಇಕ್ಷುರಸ ಮೊದಲಾದ ಮಂಗಳದ್ರವ್ಯಗಳಿಂದ ಪಾದಾಭಿಷೇಕ ನಡೆಸಲಾಯಿತು.

ಪುಷ್ಪವೃಷ್ಟಿ ಬಳಿಕ ಮಹಾಮಂಗಳಾರತಿ ಹಾಗೂ ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ, ಸೋನಿಯಾವರ್ಮ, ಪೂರಣ್‍ವರ್ಮ, ಭರತ್‍ರಾಜ್ ಮೊದಲಾದವರು ಪಾದಾಭಿಷೇಕ ಮಾಡಿದರು.

ಪೂಜ್ಯ ನಿರ್ವಾಣ ಸಾಗರ ಕ್ಷುಲ್ಲಕ ಮಹಾರಾಜರು ಹಾಗೂ ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

error: Content is protected !!