ಬೆಳ್ತಂಗಡಿ : ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆ ಪುತ್ತೂರಿನ ಪುರಭವನದಲ್ಲಿ ಪೂರ್ಣಗೊಂಡಿದೆ. ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಚುನಾವಣಾ ಆಯೋಗ ಮಾಡಿತ್ತು ಕಳೆದ ಕೆಲವು ಅವಧಿಗಳನ್ನು ಪರಿಶೀಲಿಸಿ ಬಂದಂತಹ ಮೀಸಲಾತಿ ಸ್ಥಾನಗಳನ್ನು ಹೊರತು ಪಡಿಸಿ ಆ್ಯಪ್ ಮೂಲಕ ಪ್ರಕ್ರಿಯೆ ನಡೆಸಲಾಗಿತ್ತು. ಅದರೆ ಕೆಲವೊಂದು ಪಂಚಾಯಿತಿಗಳಲ್ಲಿ ಈ ಬಗ್ಗೆ ಅಸಾಮಾಧಾನದ ಹೊಗೆಯಾಡುತ್ತಿದೆ.ಈ ಬಗ್ಗೆ ಆಯ್ಕೆ ಪ್ರಕ್ರಿಯೆ ಸಂದರ್ಭ ಕೆಲವೊಂದು ಚರ್ಚೆಗಳೂ ಆಗಿತ್ತು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಪ್ರತಿಕ್ರಿಯೆ ನೀಡುತ್ತಾ ಬಹುತೇಕ ಇದೇ ಅಂತಿಮವಾಗಿರುತ್ತದೆ ಅದರೂ ಏನಾದರೂ ಪ್ರಕ್ರಿಯೆಯಲ್ಲಿ ಗೊಂದಲ ಸಂಶಯ ಇದ್ದಲ್ಲಿ ಲಿಖಿತವಾಗಿ ದೂರನ್ನು ಚುನಾವಣಾ ಆಯೋಗಕ್ಕೆ ನೀಡಬಹುದು ಎಂದರು.
ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿಯೂ ಸಾಮಾನ್ಯ ಮಹಿಳೆ ಬಂದಿದೆ ಕಳೆದ ಹಲವು ವರುಷಗಳಿಂದ ಇಲ್ಲಿ ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿ ಬಂದಿದ್ದು ಈ ಬಾರಿಯೂ ಪುನರಾವರ್ತನೆಯಾಗಿದೆ. ಎಂದು ಗ್ರಾ.ಪಂ ಸದಸ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಹಾಗೂ ಇನ್ನೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದಾಗ ಲಿಖಿತ ದೂರನ್ನು ನೀಡಲು ಅಧಿಕಾರಿಗಳು ಸೂಚಿಸಿದರು. ಅದರಂತೆ ಗ್ರಾ.ಪಂ ಸದಸ್ಯರುಗಳಾದ ದಿನೇಶ್ ಶೆಟ್ಟಿ ಲಾಯಿಲ, ಪ್ರಸಾದ್ ಶೆಟ್ಟಿ ಎಣಿಂಜೆ, ಗಣೇಶ್ ಲಾಯಿಲ, ಹರಿಕೃಷ್ಣ, ದೂರನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಅದೇ ರೀತಿ ತಾಲೂಕಿನ ಬೆಳಾಲು, ಪಡಂಗಡಿ ಸೇರಿದಂತೆ ಕೆಲವೊಂದು ಪಂಚಾಯತ್ ಗಳಲ್ಲಿ ಇಂತಹ ಗೊಂದಲ ಕಂಡುಬಂದಿದ್ದು. ಗೊಂದಲಕ್ಕೆ ಯಾವ ರೀತಿಯಲ್ಲಿ ತೆರೆ ಬೀಳಲಿದೆ ಎಂದು ಕಾದು ನೋಡಬೇಕು.