ಮಣ್ಣಿನಡಿ ಸಿಲುಕಿ ವಿದ್ಯಾರ್ಥಿ ನಾಪತ್ತೆ ಪ್ರಕರಣ: ಮುಂದುವರಿದ ಕಾರ್ಯಾಚರಣೆ: ಬೃಹತ್ ಬಂಡೆಗಳಿಂದ ತೊಡಕು

 

ಬೆಳ್ತಂಗಡಿ: ತಾಲೂಕಿನ ಎಳನೀರು ಸಮೀಪದ ಬಂಗಾರ್ ಪಲ್ಕೆ ಎಂಬಲ್ಲಿ ಕಾಡಿನ ಮಧ್ಯೆ ಇರುವ ಜಲಪಾತ ವೀಕ್ಷಿಸಲು ತೆರಳಿದ್ದ ಸಂದರ್ಭ ಗುಡ್ಡ ಕುಸಿದು ಓರ್ವ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಕಾರ್ಯಾಚರಣೆ ‌ಮುಂದುವರಿದಿದೆ. ವಿದ್ಯಾರ್ಥಿಯ ಪತ್ತೆಗೆ ಬೃಹತ್ ಬಂಡೆಗಳು ಅಡ್ಡಿಯಾಗಿವೆ.

ನಾಲ್ಕು ಮಂದಿ ವಿದ್ಯಾರ್ಥಿಗಳ ತಂಡ ಫಾಲ್ಸ್ ವೀಕ್ಷಣೆಗೆ ತೆರಳಿದ್ದು, ಈ ಸಂದರ್ಭ ಗುಡ್ಡ ಕುಸಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಮಣ್ಣಿನಡಿ ಸಿಲುಕಿ ಉಳಿದ ಮೂವರು ಪಾರಾಗಿದ್ದರು. ವಿದ್ಯಾರ್ಥಿ ಬದುಕಿರುವ ಸಾಧ್ಯತೆ ಕ್ಷೀಣಿಸಿದೆ. ಈಗಾಗಲೇ ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿಯನ್ನು ಹೊರತೆಗೆಯಲು ಕಾರ್ಯಚರಣೆ ನಡೆಯುತ್ತಿದೆ. ಬೃಹತ್ ಗಾತ್ರದ ಬಂಡೆಗಳು ಮರಗಳು ಕುಸಿದು ಬಿದ್ದಿರುವುದರಿಂದ ಅದಲ್ಲದೆ ಆ ಜಾಗಕ್ಕೆ ಯಾವುದೇ ರೀತಿಯ ವಾಹನ ಹೋಗದೆ ಇರುವುದರಿಂದ ಕಾರ್ಯಚರಣೆ ತೊಡಕ್ಕಾಗಿದೆ. ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ ಸ್ಥಳೀಯ ಎನ್.ಡಿ.ಆರ್.ಎಫ್. ತಂಡ ಕಾರ್ಯಾಚರಣೆಯಲ್ಲಿ‌ ತೊಡಗಿದ್ದು, ಸ್ಥಳೀಯ ಯುವಕರು ಸಹಾಯ ಮಾಡುತ್ತಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ನೇರ ಮಾಹಿತಿ ಪಡೆಯುತ್ತಿದ್ದಾರೆ. ದುರ್ಗಮ ಪ್ರದೇಶದಲ್ಲಿ ಘಟನೆ ನಡೆದಿರುವುದರಿಂದ ಕಾರ್ಯಾಚರಣೆ ಸಮಸ್ಯೆಯಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

error: Content is protected !!