‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ‌’ ಲೋಕಾರ್ಪಣೆ ಶೀಘ್ರ: ಶಾಸಕ ಹರೀಶ್ ಪೂಂಜ ಹೇಳಿಕೆ: ಜಿಲ್ಲೆಯ ‘ವಿಸ್ತೃತ ಪಾರ್ಕ್’ ಎಂಬ ಖ್ಯಾತಿ

 

 

 

 

ಬೆಳ್ತಂಗಡಿ: ಪ್ರಾದೇಶಿಕ ಅರಣ್ಯ ವಲಯ ಬೆಳ್ತಂಗಡಿಗೆ ಒಳಪಡುವ 32 ಸಾವಿರ ಎಕರೆಯಲ್ಲಿ 25 ಎಕರೆ ಪ್ರದೇಶವನ್ನು ವೃಕ್ಷೋದ್ಯಾನಕ್ಕೆ ಮೀಸಲಿಡುವ ಮೂಲಕ ಜಿಲ್ಲೆಯಲ್ಲೇ ವಿಸ್ತೃತ ಪಾರ್ಕ್ ತಾಲೂಕಿನ ಜನಸಾಮಾನ್ಯರಿಗೆ, ಪ್ರವಾಸಿಗರಿಗೆ ಲಭ್ಯವಾಗಿದೆ. ಶೇ.90 ಕಾಮಗಾರಿ ಪೂರ್ಣಗೊಂಡಿದ್ದು, ವಾಕಿಂಗ್ ಪಾತ್‌ಗೆ ಇಂಟರ್‌ಲಾಕ್ ಅಳವಡಿಸಿದ ಬಳಿಕ ಉದ್ಘಾಟನೆ ಮಾಡಲು ಚಿಂತನೆ ನಡೆಸಲಾಗಿದೆ. ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮೇಲಂತಬೆಟ್ಟು ಹಾಗೂ ಲಾಯಿಲ ಗ್ರಾಮದ ಗಡಿಯಲ್ಲಿರುವ ಕಲ್ಲಗುಡ್ಡೆ ಪ್ರದೇಶದಲ್ಲಿ ನಿರ್ಮಿಸಲಾದ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ದಲ್ಲಿ ಅಗತ್ಯ ಕಾಮಗಾರಿ ನಡೆಸುವ ಕುರಿತು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ಅನುದಾನ ಕೊರತೆಯಾದಲ್ಲಿ ಪಟ್ಟಣ ಪಂಚಾಯಿತಿನಿಂದ ಭರಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಆದಷ್ಟು ಶೀಘ್ರ ಉದ್ಯಾನವನ‌ ಲೋಕಾರ್ಪಣೆ ನೆರವೇರಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ವೃಕ್ಷೋದ್ಯಾನ ವಿಶೇಷತೆಗಳು:

ಸಾಲು ಮರ ತಿಮ್ಮಕ್ಕ ವೃಕ್ಷೋದ್ಯಾನ 10 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 25 ಅರಣ್ಯ ಜಾತಿಯ ಫಲ ನೀಡುವ ಗಿಡ ನೆಡಲಾಗಿದೆ. 1.6 ಕಿ.ಮೀ ಒಳಗೆ ಪ್ರಾಣಿಗಳಿಗೆ ಅವಕಾಶ ನೀಡದಂತೆ ಫೆನ್ಸಿಂಗ್ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗಾಗಿ ಪ್ಲೇ ಗ್ರೌಂಡ್ ನಿರ್ಮಾಣ ಮಾಡಲಾಗಿದೆ. ವೃಕ್ಷೋದ್ಯಾನದೊಳಗೆ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಚಿಂತನೆ ನಡೆಸಲಾಗಿದೆ. ಪ್ರಾಣಿ, ಪಕ್ಷಿ, ಪರಿಸರದ ಸಂದೇಶ ಕೋರಲಾಗುತ್ತದೆ. ಸಾರ್ವಜನಿಕರಿಗಾಗಿ ಸುಸಜ್ಜಿತ ವಾಕಿಂಗ್ ಟ್ಯ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಧ್ಯಾನ ಕ್ರಿಯೆಗಳಿಗೆ ಸಹಾಯಕವಾಗುವಂತೆ ಉದ್ಯಾನ ರೂಪಿಸಲಾಗುತ್ತಿದೆ.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯರಾದ ಶರತ್ ಕುಮಾರ್, ಅಂಬರೀಶ್, ಲೋಕೇಶ್, ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಎಂಜಿನಿಯರ್ ಮಹಾವೀರ ಆರಿಗ ಮತ್ತಿತರ ಅಧಿಕಾರಿಗಳು ಜತೆಗಿದ್ದರು.

error: Content is protected !!