ಧರ್ಮಸ್ಥಳ ದೇಗುಲಕ್ಕೆ ವಿಶೇಷ ಸಿಂಗಾರ: ಹೂ, ಹಣ್ಣು, ತರಕಾರಿಗಳಿಂದ ಅಲಂಕಾರ: ‘2021’ ಹೊಸವರ್ಷ ಸಂಭ್ರಮ

ಧರ್ಮಸ್ಥಳ: ಹೊಸ ವರ್ಷ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ವಿಶೇಷವಾಗಿ ಅಲಂಕರಿಸಲಾಗಿದೆ.


ಹೊಸ ವರ್ಷ ಸಂಭ್ರಮದ ಸರಳ ಆಚರಣೆಗಾಗಿ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ನಾಡಿನೆಲ್ಲೆಡೆಯಿಂದ ಆಗಮಿಸಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿ ದೇಗುಲದ ಮುಂಭಾಗವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಮುಂಭಾಗದಲ್ಲಿ ಶಿವ, ಪಾರ್ವತಿಯ ಬಿಂಬ ಕಾಣುವಂತೆ ಇಡಲಾಗಿದೆ.

ದೇವಸ್ಥಾನ ಆವರಣ, ಹೆಗ್ಗಡೆಯವರ ನಿವಾಸ “ಬೀಡು” ಹಾಗೂ ಇತರ ಕಟ್ಟಡಗಳನ್ನು ಹೂ, ಹಣ್ಣು, ಅಡಿಕೆ, ಬಾಳೆ, ಜೋಳ, ಎಲೆ ಇತ್ಯಾದಿ ಪ್ರಾಕೃತಿಕ ಪರಿಕರಗಳಿಂದ ಆಕರ್ಷಕ ವಿನ್ಯಾಸದಲ್ಲಿ ಸಿಂಗರಿಸಲಾಗಿದೆ.
ಈ ವಿನ್ಯಾಸಗಳು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.

error: Content is protected !!