ಅಪಹರಣದ ಕ್ಷಣಗಳ ‘ಅನುಭವ(ವ್)’:‌ ಅಮ್ಮನನ್ನು ನೆನೆದು‌ ಅತ್ತಿದ್ದೆ: “ಯಾರದ್ರೂ ಕೇಳಿದ್ರೆ ಅಣ್ಣ ಎಂದು ಹೇಳು ಅಂದಿದ್ರು”: “ಅಪ್ಪನಿಗೆ ಸರ್ಪ್ರೈಸ್ ಕೊಡೋದಾಗಿ‌ ನಂಬಿಸಿ ಕರೆದೊಯ್ದರು” ಎಂದ ಅನುಭವ್

ಉಜಿರೆ: ಅಪಹರಣ ಘಟನೆಯ‌ ಬಗ್ಗೆ ಮನೆಗೆ‌ ಆಗಮಿಸಿದವರಿಗೆ ವಿವರಿಸಿದ ಬಾಲಕ ಅನುಭವ್, ಯಾರಾದರೂ ‌ಕೇಳಿದರೆ‌ ಕಾರಿನಲ್ಲಿರುವವರು ನನ್ನ‌ ಅಣ್ಣ. ಅಕ್ಕನ ಮಗ ಎಂದು ಹೇಳು ಎಂಬುದಾಗಿ‌ ಮೊದಲೇ ತಿಳಿಸಿದ್ದರು.

ಆದರೆ ಯಾರೂ ನನ್ನ‌ ಬಗ್ಗೆ ವಿಚಾರಿಸಲಿಲ್ಲ. ಕಾರಿನಲ್ಲಿ ಕುಳ್ಳಿರಿಸಿದ ಬಳಿಕ ನಾವು ನಿನ್ನ ತಂದೆಯ ಗೆಳೆಯರು, ನಿನಗೇನು ಮಾಡುವುದಿಲ್ಲ. ತಂದೆಗೆ ಸರ್ಪ್ರೈಸ್ ನೀಡಲು ಈ‌ ರೀತಿ ಮಾಡಿದ್ದೇವೆ. ಹೆದರುವುದು ಬೇಡ. ಸುಮ್ಮನಿರು ಎಂದು ಅವರು ಹೇಳಿದ್ದರು. ಆಟವಾಡಲು ಹಲವು ವಸ್ತುಗಳನ್ನು ಹಾಗೂ ತಿನ್ನಲು ಬೇರೆ ಬೇರೆ ರೀತಿಯ ತಿಂಡಿಗಳನ್ನು ಕೊಡಿಸಿದ್ದರು. ತಾಯಿಯ ನೆನಪಾಗಿ, ನೋಡುವ ಆಸೆಯಾಗಿ ಆಳುತ್ತಿದ್ದೆ. ಅಪಹರಿಸಿದವರು ಬೇರೆ ಯಾವುದೇ ರೀತಿಯಲ್ಲಿ ಸಮಸ್ಯೆ ‌ಮಾಡಲಿಲ್ಲ ಎಂದು ತಿಳಿಸಿದ್ದಾನೆ.
ಭಾನುವಾರ ಬಂಧು‌ ಮಿತ್ರರು ಆಗಮಿಸಿದ್ದು, ಎಲ್ಲರ ಜೊತೆಗೆ ಬೆರೆತು, ಮಾತನಾಡಿದ್ದಾನೆ.

 

 

error: Content is protected !!