ಜೀವನದಲ್ಲಿ ಜಿಗುಪ್ಸೆ, ಯುವಕ ಆತ್ಮಹತ್ಯೆ

 

ವೇಣೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ನಡೆದಿದೆ.

ಪಿಲ್ಯ ಸಮೀಪದ ಉಲ್ಪೆಕೆರೆ ಎಂಬಲ್ಲಿಯ ನಿವಾಸಿ ಜಯಂತ(31) ಎಂಬವರು ಕಳೆದ 6 ತಿಂಗಳಿನಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಮನೆಯಲ್ಲಿ ಯಾರಲ್ಲೂ ಮಾತನಾಡದೆ ಮೌನವಾಗಿರುತ್ತಿದ್ದರು. ಡಿ. 15ರಂದು ಇವರು ಮನೆಯವರೊಂದಿಗೆ ಕಾರ್ಯಕ್ರವೊಂದಕ್ಕೆ ಹೋಗಿದ್ದು, ಅಲ್ಲಿಂದ ಯಾರಲ್ಲೂ ಹೇಳದೆ ಬೇಗ ಮನೆಗೆ ತೆರಳಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮನೆಯವರು ವೇಣೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

error: Content is protected !!