ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 1,729 ನಾಮಪತ್ರ ಸಲ್ಲಿಕೆ: ವಾಪಾಸಾತಿಗೆ ಡಿ. 19 ಕೊನೆ ದಿನ: ಗ್ರಾಮವಾರು ನಾಮಪತ್ರ ಸಲ್ಲಿಸಿದವರ ಒಟ್ಟು ವಿವರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತ್ ಗಳಲ್ಲಿ ಚುನಾವಣೆ ನಡೆಯಲಿದ್ದು, ಡಿ. 11ರಿಂದ 16 ರವರೆಗೆ ಒಟ್ಟು ‌1,729 ಮಂದಿ‌‌ ನಾಮಪತ್ರ ಸಲ್ಲಿಸಿದ್ದಾರೆ.‌ ನಾಮ ಪತ್ರ ಪರಿಶೀಲನೆ ಹಾಗೂ ನಾಮಪತ್ರ ವಾಪಾಸಾತಿ‌ ದಿನಾಂಕದ ಬಳಿಕ ಸ್ಪರ್ಧಿಗಳ ವಿವರ ಲಭ್ಯವಾಗಲಿದೆ. ಈಗಾಗಲೇ ಬೆಳ್ತಂಗಡಿ ತಾಲೂಕಿನಲ್ಲಿ 46 ಗ್ರಾಮ ಪಂಚಾಯತ್ ಗಳ 631 ಸ್ಥಾನಗಳಿಗೆ ಚುನಾವಣೆಗೆ ನಾಮಪತ್ರ ಸಲ್ಲಿಸಲಾಗಿದೆ.
ಗ್ರಾಮವಾರು ಒಟ್ಟು ಸಲ್ಲಿಕೆಯಾದ ನಾಮಪತ್ರಗಳ ವಿವರ ಇಂತಿದೆ. ನಾರಾವಿ ಗ್ರಾ.ಪಂ.ಗೆ 40 ನಾಮಪತ್ರ ಸಲ್ಲಿಕೆ. ಮರೋಡಿ – 28, ಹೊಸಂಗಡಿ -30, ಕಾಶಿಪಟ್ಣ – 19, ಅಂಡಿಂಜೆ – 29, ಅಳದಂಗಡಿ -38, ಸುಲ್ಕೇರಿ -17, ಬಳಂಜ – 30, ಶಿರ್ಲಾಲು – 25, ಕುಕ್ಕೇಡಿ – 46, ಪಡಂಗಡಿ – 45, ಮಾಲಾಡಿ – 44, ಕುವೆಟ್ಟು – 76, ಮೇಲಂತಬೆಟ್ಟು – 28, ಲಾಯಿಲ -66, ನಡ- 38, ನಾವೂರು – 23, ಇಂದಬೆಟ್ಟು- 28, ಮಲವಂತಿಗೆ – 20, ಮಿತ್ತಬಾಗಿಲು – 24, ಕಡಿರುದ್ಯಾವರ -24, ನೆರಿಯಾ- 41, ಚಾರ್ಮಾಡಿ -84, ಮುಂಡಾಜೆ- 28, ಕಲ್ಮಂಜ- 22, ಉಜಿರೆ-74, ಕೊಯ್ಯೂರು -41, ಕಳಿಯ – 50, ಮಡಂತ್ಯಾರ್ -46, ಮಚ್ಚಿನ -38, ತಣ್ಣೀರುಪಂಥ- 81, ಬಾರ್ಯ-59, ತೆಕ್ಕಾರು -26, ಇಳಂತಿಲ -42, ಕಣಿಯೂರು-51, ಬಂದಾರು-36, ಬೆಳಾಲು -30, ಧರ್ಮಸ್ಥಳ- 60, ಪುದುವೆಟ್ಟು -24, ಪಟ್ರಮೆ -17, ಕೊಕ್ಕಡ -35, ನಿಡ್ಲೆ-17, ಕಳಂಜ – 32, ಶಿಶಿಲ- 23, ಶಿಬಾಜೆ-16, ಅರಸಿನಮಕ್ಕಿ -38 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

error: Content is protected !!