ಶಿಶಿಲ‌, ಶಿಬಾಜೆ ಕಾಡಲ್ಲಿ‌ ಬೀಡು ಬಿಟ್ಟ ಕಾಡಾನೆ ಹಿಂಡು: ಆನೆ ಓಡಿಸಲು ಅಗ್ನಿ ಅಸ್ತ್ರ: ಮೂರು ದಿನಗಳಿಂದ ಬೀಡು ಬಿಟ್ಟಿರುವ ಸಲಗಗಳು

ಶಿಶಿಲ: ಶಿಬಾಜೆ ಗ್ರಾಮದ ಬಟ್ಟಾಜೆಯ‌ ಕಾಡಲ್ಲಿ‌ ಕಾಡಾನೆಗಳ‌ ಹಿಂಡು‌ ಬೀಡು ಬಿಟ್ಟಿದ್ದು, ನಿರಾತಂಕ ಓಡಾಟ‌ ನಡೆಸಿವೆ. ಸತತವಾಗಿ‌ ತೋಟಗಳಿಗೆ‌ ಹಾನಿಯುಂಟು‌ ಮಾಡುತ್ತಿದ್ದು ಮಂಗಳವಾರ ಸಂಜೆಯೂ ಈ ಪರಿಸರದ ತೋಟಗಳಲ್ಲಿ ಓಡಾಟ ನಡೆಸಿವೆ.
ಮಂಗಳವಾರ ಸಂಜೆ ಭಂಡಿಹೊಳೆಯ ಶರತ್ ತುಳುಪುಳೆಯವರ ತೋಟಕ್ಕೆ ಲಗ್ಗೆ ಇಟ್ಟಿದ್ದು ಕಲ್ಲಿನ ತಡೆಗೋಡೆ, ಬಾಳೆ ಗಿಡಗಳು ಸೇರಿದಂತೆ ಕೃಷಿಗೆ ಹಾನಿಯುಂಟು ಮಾಡಿವೆ. ನೀರಾವರಿ ಪೈಪ್ ಗಳಿಗೂ ಹಾನಿಯಾಗಿದೆ.

ಸಾರ್ವಜನಿಕರು ಕೆಲ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ‌ಬೆಂಕಿ ಹಾಕಿ ಆನೆಗಳಿಂದ ತಮ್ಮ ಕೃಷಿ ರಕ್ಷಿಸಿಕೊಳ್ಳಲು ‌ಹರಸಾಹಸ ಪಡುತ್ತಿದ್ದಾರೆ.

ಶಿಬಾಜೆ ಗ್ರಾಮದ ಭಂಡಿಹೊಳೆ ಪರಿಸರದಲ್ಲಿ ಕಳೆದ ಎರಡು ದಿನದ ಹಿಂದೆ ನಾರಾಯಣ ದಾಮ್ಲೆ, ಉಷಾ ಹಾಗೂ ಮುರಳೀಧರ ದಾಮ್ಲೆ ಅವರ ತೋಟಗಳಿಗೆ ಆನೆಗಳ ಹಿಂಡು ದಾಳಿ ಮಾಡಿ ತೋಟಕ್ಕೆ ಹಾನಿಯನ್ನುಂಟು ಮಾಡಿದ್ದವು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ‌ ಸೇರಿ ಕಾಡನೆ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

error: Content is protected !!