ಬೆಂಗಳೂರು: ಜಗತ್ತಿನಾದ್ಯಂತ ಜಿ-ಮೇಲ್, ಯುಟ್ಯೂಬ್ ಸೇರಿದಂತೆ ಗೂಗಲ್ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು.
ಜಿಮೇಲ್, ಯುಟ್ಯೂಬ್, ಮ್ಯಾಪ್ಸ್ ಹಾಗೂ ಡ್ರೈವ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಜಗತ್ತಿನಾದ್ಯಂತ ಗೂಗಲ್‌ನ ಬಹುತೇಕ ಸೇವೆಗಳಲ್ಲಿ ಅಡಚಣೆ ಎದುರಾಗಿತ್ತು. ಇಂದು ಡಿ.15ರಂದು ಸಂಜೆ 5 ಗಂಟೆಯಿಂದ ಗೂಗಲ್‌ನ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿತ್ತು.
ಬಹುತೇಕ ಬಳಕೆದಾರರಿಗೆ ಜಿಮೇಲ್ ಮತ್ತು ಯುಟ್ಯೂಬ್ ತೆರೆಯಲು ಸಾಧ್ಯವಾಗಲಿಲ್ಲ. ಯುಟ್ಯೂಬ್ ತೆರೆಯಲು ಪ್ರಯತ್ನಿಸಿದರೆ, ‘ಏನೋ ಸಮಸ್ಯೆಯಾಗಿದೆ’ (Something went wrong) ಎಂಬ ಸಂದೇಶ ತೋರುತ್ತಿತ್ತು. ಜಿಮೇಲ್ ತಾತ್ಕಾಲಿಕವಾಗಿ ವ್ಯತ್ಯಯವೆಂದು (Temporary Error) ಪರದೆ ಮೇಲೆ ಸಂದೇಶ ಬರುತ್ತಿತ್ತು.
ಭಾರತ, ಜಪಾನ್, ಯುರೋಪ್ ಹಾಗೂ ಅಮೆರಿಕದ ಕೆಲವು ಭಾಗಗಳಲ್ಲಿ ಗೂಗಲ್ ಸೇವೆಗಳಿಗೆ ಅಡಚಣೆಯಾಗಿತ್ತು. ಗೂಗಲ್ ನ ಸಹೋದರ ಸಂಸ್ಥೆ ಯೂಟ್ಯೂಬ್, “ಅಡಚಣೆಗಾಗಿ ವಿಷಾಧಿಸುತ್ತೇವೆ” ಎಂದು ಟ್ವೀಟ್ ಮಾಡಿತ್ತು.