ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಜಯಕೀರ್ತಿ ಜೈನ್ ಧರ್ಮಸ್ಥಳ ಅವರಿಗೆ ಹೃದಯವಂತ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ‌ ನೌಕರರ ಸಂಘದ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ ಯೂ ಆಗಿರುವ ಡಾ. ಜಯಕೀರ್ತಿ ಜೈನ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ‌ ಅನುಪಮ‌ ಸೇವೆಯನ್ನು ಗುರುತಿಸಿ ‘ಹೃದಯವಂತ ಪ್ರಶಸ್ತಿ -2020’ (ನೋಬೆಲ್ ಮೇನ್ ಅವಾರ್ಡ್) ನೀಡಿ ಗೌರವಿಸಲಾಗಿದೆ.

ಹೃದಯವಾಹಿನಿ ಕರ್ನಾಟಕ ಮಂಗಳೂರು, ಎಸ್.ಕೆ‌ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಇವರ ಆಯೋಜನೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಡಿ.12 ರಂದು ಮಂಗಳೂರು ಪುರಭವನದಲ್ಲಿ ನಡೆದ 12 ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನವಾಗಿದೆ. ಸಮ್ಮೇಳನಾಧ್ಯಕ್ಷ,‌ ದೂರದರ್ಶನ ಚಂದನವಾಹಿನಿಯ ನಿವೃತ ಹೆಚ್ಚುವರಿ ಮಹಾ ನಿರ್ದೇಶಕ, ನಾಡೋಜ ಡಾ.‌ಮಹೇಶ್ ಜೋಶಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು,‌ಬಾವಾ ಕೆ.ಪಿ ಮಂಜುನಾಥ ಸಾಗರ್, ಹಾಗೂ ಎಮ್.ಎಸ್.ಐ.ಎಲ್ ಅಧ್ಯಕ್ಷ ಎಚ್ ಹಾಲಪ್ಪ ಸಹಿತ ಗಣ್ಯರು ಭಾಗಿಯಾಗಿದ್ದರು.

error: Content is protected !!