ಇಳಂತಿಲ: ಸಾರ್ವಜನಿಕ ಸೊತ್ತುಗಳನ್ನು ಹಾಳುಮಾಡದೆ ರಕ್ಷಿಸುವುದು, ಬೀದಿ ದೀಪಗಳು ಹಗಲು ಹೊತ್ತಿನಲ್ಲಿ ಉರಿಯದಂತೆ ನೋಡಿಕೊಳ್ಳುವುದು ದೇಶ ಸೇವೆಯ ಒಂದು ಭಾಗ ಎಂದು ವಿಧಾನ ಪರಿಷತ್ ಶಾಸಕ ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು. ಅವರು ಇಳಂತಿಲ ಗ್ರಾಮದ ಕಾಯರ್ಪಾಡಿ ಜಂಕ್ಷನ್ ನಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕೆ. ಶಾಹುಲ್ ಹಮೀದ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಈಶ್ವರ ಭಟ್, ಮಾಹಿಲ್ತೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅದ್ಯಕ್ಷ ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ, ಮಾಜಿ ಗ್ರಾ.ಪಂ ಸದಸ್ಯ ಈಶ್ವರ ಗೌಡ, ಇಳಂತಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಹುಕ್ರಪ್ಪ ಗೌಡ ನಂದಿಲ, ಎಸ್. ಡಿ. ಎಂ.ಸಿ ಅದ್ಯಕ್ಷ ಆನಂದ ಪೂಜಾರಿ, ಪುತ್ತುಮೋನು, ಸಿದ್ದಿಕ್ , ದಿವಾಕರ ಬಂಗೇರ, ಮೋಹನ ನಾಯ್ಕ, ನಾರಾಯಣ ನಾಯ್ಕ, ಶರೀಫ್, ಜಿನ್ನಪ್ಪ ಪೂಜಾರಿ, ಇಬ್ರಾಹಿಂ, ಜಲೀಲ್, ಯತೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು. ಸಿದ್ದಿಕ್ ಗಂಡಿಬಾಗಿಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.