ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸದಸ್ಯತನ ಹಾಗೂ ಎಲ್ಲಾ ಹುದ್ದೆಗಳಿಗೆ ಈ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ ಎಂದು ರವಿಕುಮಾರ್ ಬರಮೇಲು ತಿಳಿಸಿದರು. ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಾಲ್ಯದಿಂದಲೂ ಅರ್ ಎಸ್ ಎಸ್, ಹಿಂದೂ ಜಾಗರಣಾ ವೇದಿಕೆ ಹಾಗೂ ಇತರ ಹಿಂದೂ ಪರ ಸಂಘಟನೆಗಳೊಂದಿಗೆ ಇದ್ದು ,ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿಯೂ ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮ ವಹಿಸಿರುತ್ತೇನೆ ಎಂದು ಹೇಳಿದ ಅವರು ಬಿಜೆಪಿಯಿಂದ ಎರಡು ಬಾರಿ ಹಾಗೂ ಸ್ವತಂತ್ರವಾಗಿ ಪಕ್ಷೇತರನಾಗಿ ಸ್ಪರ್ದಿಸಿ ಒಂದು ಒಟ್ಟು ಮೂರು ಅವಧಿಗೆ ಉಜಿರೆ ಗ್ರಾಮ ಪಂಚಾಯತ್ ಸದಸ್ಯನಾಗಿ ಸಾರ್ವಜನಿಕ ಸೇವೆ ಸಲ್ಲಿಸಿರುತ್ತೇನೆ ಅದಲ್ಲದೇ ಪಕ್ಷೇತರನಾಗಿ ಗ್ರಾಮ ಪಂಚಾಯತಿಗೆ ಸ್ಪರ್ಧಿಸಿದ್ದರೂ ಯಾವತ್ತೂ ಬಿಜೆಪಿಯ ಪರ ನಿಷ್ಠೆ ಬದಲಾಯಿಸಿರುವುದಿಲ್ಲ. ಅದ್ದರಿಂದ ಮುಂದೆಯೂ ಜನ ಸೇವೆಯನ್ನು ಮಾಡುವ ಉದ್ಧೇಶದಿಂದ ಬಿಜೆಪಿ ಪಕ್ಷದ ಪೂರ್ಣ ಕಾಲಿಕ ಹಾಗೂ ನಿಷ್ಟಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಲು ತಿರ್ಮಾನಿಸಿರುತ್ತೇನೆ.ಇನ್ನು ಮುಂದೆ ಪಕ್ಷ ನೀಡುವ ಯಾವುದೇ ಜವಾಬ್ದಾರಿ ಹಾಗೂ ಕೆಲಸ ನಿರ್ವಹಿಸಲು ಸಿದ್ದನಿದ್ದೇನೆ ಎಂದರು. ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಮನಸ್ತಾಪದಿಂದ ಬೇಸರದಿಂದ ರಾಜೀನಾಮೆ ನೀಡುವುದಲ್ಲ .ಎಂದರು ಈ ಸಂದರ್ಭದಲ್ಲಿ ರಾಮಚಂದ್ರ ಗೌಡ ಪೆರ್ಲ, ಗಣೇಶ್ ಡಿ.ಪಿ.ಮುಂಡತ್ತೋಡಿ, ಮಂಜು ಮುಂಡತ್ತೋಡಿ, ಹರೀಶ್ ಪಿ.ಬಿ.,ರಮೇಶ್ ನಾಯ್ಕ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.