ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಸಾವು: ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಮ್ಯಾಕ್ಸಿಂ ಮಾಡ್ತಾ ಮೃತ್ಯು

ಬೆಳ್ತಂಗಡಿ: ಪಕ್ಕದ ಮನೆಯ ಪಂಪ್ ಸೆಟ್ ಪರಿಶೀಲನೆ ಸಂದರ್ಭ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದ ಪರಿಣಾಮ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ನಡೆದಿದೆ.
ಡಿ.1ರಂದು ಬೆಳಗ್ಗೆ ಸುಮಾರು 6 ಗಂಟೆ ಸುಮಾರಿಗೆ ಚರ್ಚ್ ರೋಡ್ ನಿವಾಸಿ ಸ್ಥಳೀಯವಾಗಿ ಗ್ಯಾರೇಜ್ ಹೊಂದಿರುವ ಮ್ಯಾಕ್ಸಿಂ ಮಾಡ್ತಾ(53) ಅವರು ಮನೆಯ ಹತ್ತಿರದ, ಅವರ ಸಂಬಂಧಿ ಜೊರೋ ಜೆರಾಲ್ಡ್ ಮೊನೀಸ್ ಎಂಬವರ ಮನೆಯ ಹಿಂಬದಿಯಲ್ಲಿರುವ ಬಾವಿ ಕಟ್ಟೆಗೆ ಅಳವಡಿಸಿದ ಪಂಪ್ ಸೆಟ್ ಪರಿಶೀಲಿಸಲು ತೆರಳಿದ್ದಾರೆ. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರ ಪುತ್ರ ದೂರು ನೀಡಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!