ಬೆಳ್ತಂಗಡಿ: ದಿನಕೂಲಿ ಕಾರ್ಮಿಕರನ್ನು ಒಳಗೊಂಡ ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆ ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕು ಘಟಕ ವತಿಯಿಂದ ದಾನಿಗಳ ನೆರವಿನೊಂದಿಗೆ ಧರೆಗುಡ್ಡೆ ಎಂಬಲ್ಲಿ ವಿಕಲಾಂಗರು ಮತ್ತು ಅಸಹಾಯಕರಾಗಿದ್ದ ರಾಜೇಶ್ ಪೂಜಾರಿ ಎಂಬವರಿಗೆ ನಿರ್ಮಿಸಿದ 32ನೇ ‘ಆಸರೆ’ ಮನೆಯನ್ನು ಹಸ್ತಾಂತರಿಸಲಾಯಿತು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ನೂತನ ಮನೆಯನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗೆಜ್ಜೆಗಿರಿ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು ವಹಿಸಿದ್ದರು.
ಕಾರ್ಯಕ್ರಮಕ್ಕೆ ಟೆಲಿಕಾನ್ಪರೆನ್ಸ್ ಮೂಲಕ ಶುಭ ಹಾರೈಸಿದ ಬೆಂಗಳೂರು ಗ್ರಾಮಾಂತರ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಅವರು, ಕೂಲಿ ಕಾರ್ಮಿಕರ ಸಂಘಟನೆ, ರಾಜಕೇಸರಿ ಇತರ ಸಂಗಡಿಗರನ್ನು ಸೇರಿಸಿ ಬಡವರ ಸೇವೆ ಮಾಡುತ್ತಿದೆ. ರಾಜಕೇಸರಿ ಕೈಗೆತ್ತಿಕೊಳ್ಳುವ 33ನೇ ಮನೆ ಯೋಜನೆಯನ್ನು ತಾನೇ ಪೂರ್ಣ ಪ್ರಾಯೋಜಿಸುತ್ತೇನೆ ಎಂದು ಘೋಷಿಸಿದರು.
ಈ ಸಂದರ್ಭ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಪ್ರವೀಣ್ ಕೋಟ್ಯಾನ್ ಪಣಪಿಲ, ಕೊರಗಜ್ಜ ಹಾಡು ಹಾಡಿ ಖ್ಯಾತರಾದ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.
ರಾಜಕೇಸರಿ ಮೂಡುಬಿದಿರೆ ತಾ. ಅಧ್ಯಕ್ಷ ಕಿಶೋರ್, ದರೆಗುಡ್ಡೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಯುವಮೋರ್ಚಾದ ಪ್ರವೀಣ್ ನೆಟ್ಟಾರು, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ, ಎಪಿಎಂಸಿ ಸದಸ್ಯ ಅಶೋಕ್ ಶೆಟ್ಟಿ ಬೇಲೊಟ್ಟು, ಉದ್ಯಮಿ ಕುಮಾರ್ ಪೂಜಾರಿ ಇರುವೈಲು, ಹಿಂಜಾವೇ ಮೂಡುಬಿದಿರೆ ತಾ. ಅಧ್ಯಕ್ಷ ಸಮಿತ್‍ರಾಜ್, ಗ್ರಾಪಂ ಮಾಜಿ ಸದಸ್ಯ ಜಯಕುಮಾರ್ ಶೆಟ್ಟಿ, ಆಲಡ್ಕ ಹಿಂದೂ ಯುವಶಕ್ತಿ ಅಧ್ಯಕ್ಷ ದೇವದಾಸ್ ಸಾಲ್ಯಾನ್, ರಾಜಕೇಸರಿ ಜಿಲ್ಲಾಧ್ಯಕ್ಷ ಅಶೋಕ್ ಎಸ್. ಮಾಲೆಮಾರ್, ಕಾರ್ಕಳ ಅಧ್ಯಕ್ಷ ಸಂಪತ್ ಭಂಡಾರಿ, ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್, ರಾಮಸೇನೆ ತಾಲೂಕು ಅಧ್ಯಕ್ಷ ಅಶೋಕ ಆಳ್ವ ಭಾಗವಹಿಸಿದ್ದರು.
ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಮ್‍ಕುಮಾರ್ ಮಾರ್ನಾಡು ಮತ್ತು ಶುಭಕರ ಅಂಚನ್ ನಿರೂಪಿಸಿ, ಸಂದೀಪ್ ವಂದಿಸಿದರು.