ಸಮಾಜಮುಖಿ ಕೆಲಸಗಳಿಂದ ಅಭಿವೃದ್ಧಿ: ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ಚಾರ್ಮಾಡಿ-ಕಕ್ಕಿಂಜೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ತೋಟತ್ತಾಡಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ತೋಟತ್ತಾಡಿಯ ಬಡ ಕುಟುಂಬವೊಂದಕ್ಕೆ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಿಸಿ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಲಬ್‌ಗೆ ರೋಟರಿ ಸಂಸ್ಥೆಯನ್ನು ಎಷ್ಟು ಹತ್ತಿರವಾಗಿ ನಾವು ನೋಡುತ್ತೇವೋ ಅಷ್ಟೆ ವಿಸ್ತಾರವಾದ ಸೇವೆಯನ್ನು ಮಾಡುತ್ತಾ ಬರುತ್ತಿರುವುದು ಕಾಣುತ್ತದೆ. ಕಷ್ಟದಲ್ಲಿರುವವರಿಗೆ ಸಮಾಜದ ಬೆಳಕು ಕಾಣುವಂತಹ ಕೆಲಸ ಮಾಡುವುದು, ಸಮಾಜಕ್ಕೆ ಬೇಕಾದಂತಹ ಸಮಾಜಮುಖಿ ಚಟುವಟಿಕೆ ಒಂದು ಕಡೆಯಾದರೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಬಗ್ಗೆ ಮಾತನಾಡುವಾಗಲೂ ಹೊರಗೆ ನಿಂತವರಿಗೆ ಈ ಸಂಘಟನೆಗಳ ಒಟ್ಟಿಗೆ ಸಂಪರ್ಕಕ್ಕೆ ಬಂದಾಗ ದೇಶಾದ್ಯಂತ ಈ ರೀತಿಯಲ್ಲಿ ಪ್ರತಿ ಗ್ರಾಮ ಗ್ರಾಮಗಳಲ್ಲಿ ಚಟುವಟಿಕೆಗಳ ಮಾಡುವ ಸಂಸ್ಕಾರ, ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ರಾಷ್ಟ್ರಪ್ರಜ್ಞೆಯನ್ನು ಬೆಳೆಸುವಂತಹ ಸಂಘಟನೆಯೂ ಆಗಿದೆ‌. ಅದೇ ರೀತಿ ಈ ಕುಟುಂಬಕ್ಕೆ ಕಷ್ಟದಿಂದ ಹೊರ ಬರುವಂತಾಗಲಿ ಎಂದರು.


ತೋಟತ್ತಾಡಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಘಟಕದ ಅಧ್ಯಕ್ಷ ಜಯಾನಂದ ಡಿ. ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಧನಂಜಯ ರಾವ್, ಚಾರ್ಮಾಡಿ- ಕಕ್ಕಿಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ಓಬಯ್ಯ ಗೌಡ, ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ವೆಂಕಟೇಶ ಭಟ್ ಕಜೆ, ವೆಂಕಟ್ರಾಯ ಅಡೂರು, ಶ್ರೀಧರ್ ಕೆ.ವಿ., ಯಶವಂತ ಪಟವರ್ಧನ್, ನಿವೃತ್ತ ಮೇಜರ್ ಎಂ.ವಿ. ಭಟ್, ರಾಮಕೃಷ್ಣ ಇರ್ವತ್ರಾಯ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಗೋ ರಕ್ಷಕ ಪ್ರಮುಖ್ ದಿನೇಶ್ ಚಾರ್ಮಾಡಿ, ತೋಟತ್ತಾಡಿ ಭಜರಂಗದಳದ ಸಂಚಾಲಕ ಅವಿನಾಶ್ ಹಾಗೂ ತೋಟತ್ತಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಓಬಯ್ಯಗೌಡ ಸ್ವಾಗತಿಸಿ, ದಿನೇಶ್ ವಂದಿಸಿದರು. ಸುಧೀಶ್ ಚಾರ್ಮಾಡಿ ನಿರೂಪಿಸಿದರು.

error: Content is protected !!