ಪಟ್ಟಣ ಪಂಚಾಯತ್ ಪ್ರಥಮ‌ ಸಭೆ: ಪ್ರಮಾಣ ವಚನ ಸ್ವೀಕಾರ: 2 ವರ್ಷಗಳ ಆಡಳಿತಾಧಿಕಾರದ ಚರ್ಚೆ

ಬೆಳ್ತಂಗಡಿ: ಪಟ್ಟಣ ಪಂಚಾಯಿತಿ ಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷೆ ರಜನಿ ಕುಡ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
2 ವರ್ಷ 2 ತಿಂಗಳು ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿ ಅಧಿಕಾರ ನಡೆದಿದ್ದು, ಅದರ ಖರ್ಚು-ವೆಚ್ಚಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಅನುಮೋದನೆಗಾಗಿ ಮಂಡನೆ ಮಾಡಿದಾಗ ಈ ಚರ್ಚೆ ನಡೆಯಿತು. ಹಲವಾರು ವಿಷಯಗಳ ಕುರಿತು ವಿಪಕ್ಷ ಸದಸ್ಯ ಜಗದೀಶ್ ಡಿ. ಚರ್ಚೆ ನಡೆಸಿ ತರಾಟೆಗೆ ತೆಗೆದುಕೊಂಡರು.

ಹೊಸತಾಗಿ ಅಧಿಕಾರ ಸ್ವೀಕರಿಸಿಕೊಂಡ ಆಡಳಿತ ಪಕ್ಷದ ಅಧ್ಯಕ್ಷೆ ರಜನಿ‌ ಕುಡ್ವ ಮತ್ತು ಉಪಾಧ್ಯಕ್ಷ ಜಯಾನಂದ ಗೌಡ ಸಮರ್ಪಕ ಉತ್ತರ ನೀಡಿದರು.

ಸಭೆಯ ಪ್ರಥಮದಲ್ಲಿ ಪ್ರಮಾಣ ಸ್ವೀಕರಿಸಿ, ಸಭೆಯನ್ನು ಮುನ್ನಡೆಸಿದರು.
ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯರಾದ ಲೋಕೇಶ್, ಶರತ್ ಕುಮಾರ್, ಅಂಬರೀಶ್, ತುಳಸಿ, ಗೌರಿ, ಜಗದೀಶ್ ಡಿ., ರಾಜಶ್ರೀ ರಮಣ್, ಮುಸ್ತರ್ ಜಾನ್, ಜನಾರ್ಧನ,ಮುಖ್ಯಾಧಿಕಾರಿ ಸುಧಾಕರ್, ರೋಜ್ ಗಾರ್ ಯೋಜನಾಧಿಕಾರಿ
ವೆಂಕಟರಮಣ ಶರ್ಮ, ಇಂಜಿನಿಯರ್ ಮಹಾವೀರ ಅರಿಗ, ಮೆಸ್ಕಾಂ ಜೆಇ ಮನಮೋಹನ್ ಉಪಸ್ಥಿತರಿದ್ದರು.

error: Content is protected !!