ಸಿದ್ಧ ಉಡುಪು ತಯಾರಿ ತರಬೇತಿ: ಲಾಯಿಲಾದಲ್ಲಿ ನ. 23ರಿಂದ 27ರವರೆಗೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತರಬೇತಿ ಸಂಸ್ಥೆ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ (ಲಾಯಿಲಾ ಸೇತುವೆ ಬಳಿ ಹಳೆ ಸಿರಿ ಕಚೇರಿ)ಯಲ್ಲಿ ನ. 23 ರಿಂದ 27ರ ತನಕ ಸಿದ್ಧ ಉಡುಪು ತಯಾರಿ (ಟೈಲರಿಂಗ್) ತರಬೇತಿಯನ್ನು ಹಮ್ಮಿಕೊಂಡಿದೆ.

ತರಬೇತಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಟೈಲರಿಂಗ್ ತಿಳಿದಿರಬೇಕು, ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ತರಬೇತಿ ನಡೆಯಲಿದೆ. ಆಗಮಿಸುವಾಗ ಆಧಾರ್ ಪ್ರತಿ ಮತ್ತು ಪಾಸ್ ಪೋರ್ಟ್ ಭಾವಚಿತ್ರ ಕಡ್ಡಾಯವಾಗಿ ‌ನೀಡಬೇಕು.‌ ತರಬೇತಿ ಉಚಿತವಾಗಿದೆ‌. ಆಸಕ್ತರು ಸಂಖ್ಯೆ (9108764530) ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!