‘ದೀಪಾವಳಿ ದೋಸೆ’ ಹಬ್ಬಕ್ಕೆ ಚಾಲನೆ: ದೋಸೆ ಸವಿದ ಸಾರ್ವಜನಿಕರು

ಬೆಳ್ತಂಗಡಿ: ಬಿ.ಜೆ.ಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಹಮ್ಮಿಕೊಂಡಿರುವ ದೀಪಾವಳಿ ದೋಸೆ ಹಬ್ಬಕ್ಕೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ತ್ ಕಾಮತ್ ಚಾಲನೆ ನೀಡಿದರು. ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ದೋಸೆ ಹೊಯ್ಯುವ ಮೂಲಕ  ದೋಸೆ ವಿತರಣೆಗೆ ಚಾಲನೆ ನೀಡಿದರು.

ತುಳುನಾಡಿನ ಸಾಂಪ್ರದಾಯಂತೆ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ, ದೋಸೆ ಹಂಚುವ ಮೂಲಕ ದೋಸೆ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಸಂಜೆ 6ಗಂಟೆ ವರೆಗೂ ‘ದೀಪಾವಳಿ ದೋಸೆ’ ಹಬ್ಬದ ಮೂಲಕ 5 ಸಾವಿರಕ್ಕೂ ಹೆಚ್ಚು ದೋಸೆ ಹಂಚುವ ಕಾರ್ಯ ನಡೆಯಲಿದೆ. ಸಂಜೆ 6 ಗಂಟೆಗೆ ‘ಗೋಪೂಜಾ” ಉತ್ಸವವೂ ನಡೆಯಲಿದೆ.

ಶಾಸಕ ಶ್ರೀ ಹರೀಶ್ ಪೂಂಜ, ಬಿ.ಜೆ.ಪಿ. ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಪ.ಪಂ.ಅಧ್ಯಕ್ಷೆ ರಜನಿ ಕುಡ್ವ, ಮಂಡಲ ಕಾರ್ಯದರ್ಶಿ ಸೀತರಾಮ ಬೆಳಾಲು, ಎಸ್. ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಮುಂಡಾಜೆ, ಸುಬ್ರಹ್ಮಣ್ಯ ಗೌಡ ಕೈಕುರೆ, ಜಯಂತ ಗೌಡ, ವಸಂತ ಮಜಲು, ಯಶವಂತ ಶ್ರಿನಿವಾಸ, ರಾಜೇಶ್ ಪೆಂರ್ಬುಡ, ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ, ಯತೀಶ್ ಶೆಟ್ಟಿ, ಅಮಿತಾ, ಪ್ರಭಾಕರ್ ಆಚಾರ್ಯ,ವಿಜಯ ಅರಂಬೊಡಿ, ಸದಸ್ಯರುಗಳಾದ ಶರತ್, ತುಳಸಿಕರುಣಾಕರ್, ಗೌರಿ, ಶ್ರೀನಿವಾಸರಾವ್ ಧರ್ಮಸ್ಥಳ, ಸೂರಜ್ ಜೈನ್, ಮಾರ್ನಾಡ್, ಉಮೇಶ್ ಕುಲಾಲ್, ಸುಧಾಕರ್, ಬೆಳ್ತಂಗಡಿ ಮಂಡಲ ಹಾಗೂ ದ.ಕ. ಜಿಲ್ಲೆಯ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!