ಗ್ರಾಮೀಣ ಜನರಿಗಾಗಿ ‘ಗ್ರಾಮದೆಡೆಗೆ ಪತ್ರಕರ್ತರ ನಡಿಗೆ’: ಶ್ರವಣ್ ಕುಮಾರ್ ನಾಳ

ಪುತ್ತೂರು: ಪತ್ರಕರ್ತರ ಜೀವನ ಭದ್ರತೆಗೆ ಬೇಕಾದ ಯೋಜನೆ, ಪತ್ರಿಕಾ ಭವನದ ಸುಂದರೀಕರಣ, ಪುತ್ತೂರು ಪತ್ರಕರ್ತರ ಸಂಘದ ಸರ್ವ ಸದಸ್ಯರಿಗೂ ಸರ್ಕಾರಿ ನಿವೇಶನ ನಿಯೋಜನೆ, ಪುತ್ತೂರು ಪತ್ರಕರ್ತರ ಸಂಘದ ಅಧೀನದಲ್ಲಿರುವ ವಾರ್ತಾ ಇಲಾಖೆ ಕಟ್ಟಡವನ್ನು ಶಾಶ್ವತವಾಗಿ ಪುತ್ತೂರು ಪತ್ರಕರ್ತರ ಸಂಘದ ಅಧೀನಕ್ಕೆ ತರುವುದು, ತಾಲೂಕಿನ ಪತ್ರಕರ್ತರನ್ನು ಗ್ರಾಮೀಣ ಭಾಗಕ್ಕೆ ಕರೆದೊಯ್ಯುವ ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು ಸರ್ಕಾರಕ್ಕೆ ಮುಟ್ಟಿಸಲು ‘ಗ್ರಾಮದೆಡೆಗೆ ಪತ್ರಕರ್ತರ ನಡಿಗೆ’ ಎಂಬ ಹೊಸ ಯೋಜನೆ ಅನುಷ್ಠಾಕ್ಕೆ ತರುವ ಚಿಂತನೆ ಇದೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘ 25 ವರ್ಷ ಪೂರ್ಣಗೊಳಿಸುತ್ತಿರುವುದರಿಂದ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮ ಆಯೋಜಿಸುವ ಯೋಜನೆಗಳಿವೆ ಎಂದು ಜನೆ ಮುಂತಾದ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಪುತ್ತೂರು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಿಳಿಸಿದರು.
ಅವರು ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ತಮ್ಮ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ತುಳು ಭಾಷೆಯಲ್ಲಿ ಪುತ್ತೂರು ಪ್ರೆಸ್‍ಕ್ಲಬ್ ನಾಮಫಲಕ:
ತುಳು ತಾಯಿಭಾಷೆ, ಕನ್ನಡದಲ್ಲಿ ಪುತ್ತೂರು ಪತ್ರಿಕಾಭವನದ ಹೆಸರು ಇರುವಂತೆಯೇ ತುಳು ಲಿಪಿಯಲ್ಲಿ ಪುತ್ತೂರು ಪ್ರೆಸ್‍ಕ್ಲಬ್‍ನ ನಾಮಫಲಕ ಅಳವಡಿಸಲಾಗುವುದು. ಜಿಲ್ಲೆಯ 2ನೇ ಅತೀ ದೊಡ್ಡ ಪತ್ರಕರ್ತರ ಸಂಘ ಎಂಬ ಹೆಗ್ಗಳಿಕೆಗೆ ಪುತ್ತೂರು ಸಂಘದ್ದಾಗಿದ್ದು, 25ನೇ ವಸಂತಕ್ಕೆ ಕಾಲಿರಿಸಿದೆ. ಈ ಸಂದರ್ಭದಲ್ಲಿ ತಾಲೂಕಿನ ಸಂಘದ ಹಿರಿಯ ಪತ್ರಕರ್ತರನ್ನು ಹಾಗೂ ಸಂಘದ ಸದಸ್ಯರ ವಿಶ್ವಾಸ ಪಡೆದು ಮುಂದಿನ ದಿನಗಳಲ್ಲಿ ಮಹತ್ತರ ಜನಪರ ಯೋಜನೆ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಗಣ್ಯರಿಂದ ಅಭಿನಂದನೆ:
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚೀವ ಡಿ.ವಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮೊದಲಾದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!