ಸುಲ್ಕೇರಿಮೊಗ್ರು ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಮ್ಮಾಜಿ ಕೋಟ್ಯಾನ್ ನೇಮಕ

ಸುಲ್ಕೇರಿಮೊಗ್ರು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಮ್ಮಾಜಿ ಕೋಟ್ಯಾನ್ ನೇಮಕಗೊಂಡಿದ್ದಾರೆ.
ಸಹಕಾರಿ ಸಂಘದಲ್ಲಿ ಕಳೆದ 37ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾದ ಪಿ.ಹೆಚ್. ನಿತ್ಯಾನಂದ ಶೆಟ್ಟಿ ಅವರು ಅಧಿಕಾರ ಹಸ್ತಾಂತರಿಸಿದರು.
ಸಂಘದ ಅಧ್ಯಕ್ಷರಾದ ನವೀನ್ ಕೆ. ಸಾಮಾನಿಯವರು ಅಮ್ಮಾಜಿ ಅವರಿಗೆ ಶುಭ ಕೋರಿದರು. ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲಬೈಲ್, ನಿರ್ದೇಶಕರಾದ ಆನಂದ್ ಸಾಲ್ಯಾನ್ ಒಡಿಮಾರ್, ಅಶೋಕ್ ನಲ್ಲಾರ್ ನಾರಾಯಣ್ ರಾವ್, ಶಿವಪ್ಪ ಪೂಜಾರಿ ಸುಲ್ಕೇರಿ ಮೊಗ್ರು, ಶೀನಪ್ಪ ಎಂ. ಮಲೆಕ್ಕಿಲ ಸುಮಿತ್ರ ಹೆಗ್ಡೆ, ಮಾಜಿ ನಿರ್ದೇಶಕರಾದ ಕಿಶೋರ್ ಹೆಗ್ಡೆ ಎರ್ಮೆತ್ತೋಡಿ, ವಿನಯ ಕುಮಾರ್ ಜೈನ್, ಶಿರ್ಲಾಲ್ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಾದವ ಶಿರ್ಲಾಲ್, ಪ್ರಮುಖರಾದ ಸುದೀಶ್ ಹೆಗ್ಡೆ ಕರಂಬಾರು ಗುತ್ತು ಬ್ಯಾಂಕಿನ ಸಿಬ್ಬಂದಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!