ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: 11 ಮಂದಿ ಆರೋಪಿಗಳ ಬಂಧನ

ಬಂಟ್ವಾಳ: ಭಂಡಾರಿಬೆಟ್ಟು ಬಳಿಯ ವಸತಿ ಸಂಕೀರ್ಣದಲ್ಲಿ ನಡೆದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಲ್ಲಿ ಪೊಲೀಸರು ಬೆಳ್ತಂಗಡಿಯ ಪ್ರತೀಕ್ ಹಾಗೂ ಜಯೇಶ್ ಯಾನೆ ಸಚ್ಚು ಎಂಬವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.‌ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರ ಒಟ್ಟು ಸಂಖ್ಯೆ 11ಕ್ಕೇರಿದೆ. ಪ್ರಕರಣದಲ್ಲಿ ಈ ಮೊದಲು 9 ಮಂದಿಯನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ ಮುಖ್ಯ ಆರೋಪಿಗಳಾದ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್‌ ಕುಲಾಲ್‌, ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್‌ ಬಂಧಿಸಲಾಗಿತ್ತು. ಇವರ ವಿಚಾರಣೆಯ ವೇಳೆ ಪ್ರದೀಪ್‌ ಕುಮಾರ್‌ ಯಾನೆ ಪಪ್ಪು, ಶರೀಫ್ ಯಾನೆ ಸಯ್ಯದ್‌ ಶರೀಫ್, ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆಕಾಶಭವನ ಶರಣ್‌ ಎನ್ನುವವರು ಹತ್ಯೆಗೆ ಒಳಸಂಚು ರೂಪಿಸಿದ್ದರು . ವಾಹನದ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ದಿವ್ಯರಾಜ್‌, ಅನಿಲ್‌ ಪಂಪ್‌ವೆಲ್‌, ಆರೋಪಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದ ಉಜಿರೆ ನಿವಾಸಿ ರಾಜೇಶ್‌ ಬಗ್ಗೆ ಮಾಹಿತಿ ಪಡೆದು ಅವರನ್ನು ಬಂಧಿಸಲಾಗಿತ್ತು. ಸುರೇಂದ್ರ ಬಂಟ್ವಾಳ್ ಅವರನ್ನು ಅ.20ರಂದು ಬಂಟ್ವಾಳದ ಫ್ಲಾಟ್ ನಲ್ಲಿ ಹತ್ಯೆ ಮಾಡಲಾಗಿತ್ತು.

error: Content is protected !!