ಕಾಮಗಾರಿ ಗುಣಮಟ್ಟದಲ್ಲಿ ರಾಜಿ‌ ಇಲ್ಲ: ಶಾಸಕ ಹರೀಶ್ ಪೂಂಜ

ಮುಂಡಾಜೆ: ತಾಲೂಕಿನ ಪ್ರತಿ ಗ್ರಾಮದಲ್ಲಿ ಮೂಲ ಭೂತ ಸೌಕರ್ಯಗಳನ್ನು ಅಭಿವೃದ್ದಿಗೊಳಿಸುವ ಧ್ಯೇಯ ಹೊಂದಿದ್ದು ಈಗಾಗಲೇ ತಾಲೂಕಿನಾದ್ಯಂತ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ, ಜನರ ಹಲವು ವರ್ಷಗಳ ಬೇಡಿಕೆ ಈಡೇರಿಕೆಯ ಸಮಯ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಗುರುವಾರ ಮುಂಡಾಜೆ ಗ್ರಾಮದಲ್ಲಿ ಆರಂಭವಾಗಿರುವ ರಸ್ತೆ ಅಭಿವೃದ್ದಿ ಗುಣಮಟ್ಟ ಕಾಮಗಾರಿಗಳನ್ನು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾಹಿತಿ ಪಡೆದು ಮಾತನಾಡಿದರು.
ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇಲ್ಲ ಅದಕ್ಕಾಗಿ ಇವತ್ತು ಅಧಿಕಾರಿಗಳೊಂದಿಗೆ ಬಂದ್ದು ಪರಿಶೀಲಿಸಿದ್ದೇನೆ. ಅದೇ ರೀತಿ ತಾಲೂಕಿನ ಹಲವೆಡೆ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಕಾಮಗಾರಿಯ ಬಗ್ಗೆ ಸಂಶಯ ಬಂದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಒಂದು ವೇಳೆ ಕಳಪೆ ಕಾಮಗಾರಿ ಎಂದು ತಿಳಿದು ಬಂದಲ್ಲಿ ಅದನ್ನು ನಿರ್ವಹಿಸುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಕಳಪೆ ರಹಿತ ಗುಣಮಟ್ಟದ ಕಾಮಗಾರಿ ಆಗಬೇಕು. ಇದಕ್ಕಾಗಿ ತಾಲೂಕಿನ ಜನತೆ ಸಹಕರಿಸಬೇಕು ಎಂದರು.‌ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ವನಾಥ ಬೆಂಡೆ, ಸುರೇಶ್ ಕುಮಾರ್ ಹೆಗ್ಡೆ, ವಿಶ್ವನಾಥ ಶೆಟ್ಟಿ, ಸುರೇಶ ಗೋಖಲೆ, ಗಣೇಶ್ ಬಂಗೇರ, ಬಿ.ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!