ಸುಬ್ರಹ್ಮಣ್ಯ‌ ಸ್ಥಾನಿಕ ಬ್ರಾಹ್ಮಣ ಸಭಾದಿಂದ ಕಾಳಜಿ‌ ಫಂಡ್ ಗೆ 1 ಲಕ್ಷ ರೂ. ಹಸ್ತಾಂತರ

ಬೆಳ್ತಂಗಡಿ: ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ವತಿಯಿಂದ ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್ ಗೆ 1 ಲಕ್ಷ ರೂ. ಧನಸಹಾಯದ ಚೆಕ್ ಹಸ್ತಾಂತರಿಸಲಾಯಿತು.
ಚೆಕ್ಕನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರಿಗೆ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಅಧ್ಯಕ್ಷರ ದಿನೇಶ್ ಕುಮಾರ್ ಎಂ.ಎಸ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ‌ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಕೋಶಾಧಿಕಾರಿ ರೇಖಾ ಸುಧೀರ್ ರಾವ್, ಕಾಳಜಿ ರಿಲೀಫ್ ಫಂಡ್ ಕಾರ್ಯದರ್ಶಿ ಬಿ.ಕೆ.ಧನಂಜಯ ರಾವ್ ಉಪಸ್ಥಿತರಿದ್ದರು.

error: Content is protected !!