ಕೇಂದ್ರ ಸರ್ಕಾರದ ಮಸೂದೆಗಳು ಮಾರಣಾಂತಿಕ, ಸುರೇಶ್ ಭಟ್ ಕೊಜಂಬೆ

ಬೆಳ್ತಂಗಡಿ: ಕೇಂದ್ರ ಸರ್ಕಾರ 6 ಮಸೂದೆಗಳು ಅನುಷ್ಠಾನ ಮಾಡಲು ಹೊರಟಿದೆ ಈ ಎಲ್ಲಾ ಮಾಸೂದೆಗಳೂ ಮಾರಣಾಂತಿಕ ಎಂದು ಕರ್ನಾಟಕ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಹೇಳಿದರು ಅವರು, ಜೆ ಎಫ್ ಸಭಾ ಭವನದಲ್ಲಿ ಅ 28 ರಂದು ನಡೆದ ಜಾಗೋ ಕಿಸಾನ್ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ದೇಶದ ಬೆನ್ನಲುಬಾಗಿರುವ ರೈತರ ಪರಿಸ್ಥಿತಿ ಅಪಾಯದಲ್ಲಿದೆ. “ಉಳುವವನೇ ಭೂಮಿಯ ಒಡೆಯ ಎಂಬ ನೀತಿಗೆ ಬದಲಾಗಿ ಉಳ್ಳವನೇ ಭೂಮಿಯ ಒಡೆಯ ಎಂಬಂತೆ ದೇಶದ ಕೃಷಿ ವ್ಯವಸ್ಥೆಯನ್ನೇ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿದ್ದಾರೆ. ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಮಸೂದೆಯ ಕುರಿತು ವಿವರಿಸಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದ ಕೃಷಿ ಮಸೂದೆ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ “ಜಾಗೋ ಕಿಸಾನ್, “ಕೃಷಿ ಸಂಹಾರ ಬಿಜೆಪಿಯ ಹುನ್ನಾರ” ಎಂಬ ಶೀರ್ಷಿಕೆಯಡಿ ದೇಶವ್ಯಾಪಿ ನಡೆಸುತ್ತಿರುವ ಅಭಿಯಾನದ ಅಂಗವಾಗಿ ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ಸಮಾಲೋಚನಾ ಸಭೆ ಬೆಳ್ತಂಗಡಿಯ ಜಮ್ಹಿಯ್ಯತ್ತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷ ಹೈದರ್ ನಿರ್ಸಾಲ್ ವಹಿಸಿದ್ದರು.
ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ದೇಶದ ಜನತೆಯನ್ನು ಗಣನೆಗೆ ತೆಗೆದುಕೊಳ್ಳದೆ ಅಪ್ರಜಾ ತಾಂತ್ರಿಕವಾಗಿ ಕರಾಳ ಕಾನೂನುಗಳನ್ನು ಜಾರಿ ಮಾಡಿ ದೇಶವನ್ನೇ ಛಿದ್ರಗೊಳಿಸುತ್ತಿದೆ ಎಂದರು.

ಸಭೆಯಲ್ಲಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲ್, ಜಿಲ್ಲಾ ಉಪಾಧ್ಯಕ್ಷ , ಜಾಗೋ ಕಿಸಾನ್ ಜಿಲ್ಲಾ ಉಸ್ತುವಾರಿ ಆ್ಯಂಟನಿ ಪಿ.ಡಿ.‌ಮಾತನಾಡಿದರು. ಸಮಾಲೋಚನಾ ಸಭೆಯಲ್ಲಿ ಹಿರಿಯ ರೈತ ರಾಮಣ್ಣ ಗೌಡ, ದಯಾನಂದ ಶೆಟ್ಟಿ, ದಾಮೋದರ ಶೆಟ್ಟಿ, ಮಹೇಶ್ ಗೌಡ, ಸುಲೈಮಾನ್ ಬೆಳಾಲ್, ಲತೀಫ್ ಸಾಹೆಬ್, ರಝಾಕ್ ಸಾಹೆಬ್, ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿಸುರೇಶ್ ಭಟ್ ಕೊಜಂಬೆ ಅವರನ್ನು ಗೌರವಿಸಲಾಯಿತು.

ಎಸ್ ಡಿಪಿಐ ವಿಧಾನ ಸಭಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿ, ಪಝಲ್ ರಹಿಮಾನ್ ವಂದಿಸಿದರು. ಸಮಿತಿ ಸದಸ್ಯ ನಿಝಾಮ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!