ತುಳು ಭಾಷಾಭಿಮಾನ ಮೆರೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಬೆಳ್ತಂಗಡಿ ಕಚೇರಿಯ ನಾಮಫಲಕ ತುಳು ಲಿಪಿಯಲ್ಲಿ ಮಾಡುವ ಮೂಲಕ ಭಾಷಾಭಿಮಾನ‌ ಮೆರೆದಿದ್ದಾರೆ.

ದ.ಕ. ಜಿಲ್ಲೆಯಾದ್ಯಂತ ಎಲ್ಲೆಡೆ ತುಳು ಲಿಪಿಯಲ್ಲಿ ನಾಮಫಲಕ ಹಾಕಲಾಗಿದ್ದು, ಶಾಸಕ ಹರೀಶ್ ಪೂಂಜಾ ಅವರೂ ತುಳು ಭಾಷೆ ಅಭಿಮಾನದಿಂದ ತುಳು ಲಿಪಿಯಲ್ಲಿ ನಾಮಫಲಕ ಹಾಕಿಸಿದ್ದಾರೆ.

ಮೊದಲ ಸಾಲಿನಲ್ಲಿ ಶ್ರಮಿಕ‌ ಎಂದು, ಎರಡನೇ ಸಾಲಿನಲ್ಲಿ ಶಾಸಕರ ಕಚೇರಿ ಎಂದು, ಮೂರನೇ ಸಾಲಿನಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಂದು ತುಳು ಲಿಪಿಯಲ್ಲಿ ಬರೆಯಲಾಗಿದೆ. ಶಾಸಕರ ಈ ಪ್ರಯತ್ನಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.

ನೇತ್ರಾವತಿ ಉಳಿಸಿ ಹೋರಾಟದಲ್ಲಿ ಮುಂಚೂಣಿ ಹೋರಾಟವನ್ನು ಮತ್ತೆ ನೆನಪಿಸುವಂತಿದೆ ಎಂದು ಸಾರ್ವಜನಿಕರು ಫಲಕದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶಾಸಕರ ಕಚೇರಿಯ ಈ ನಾಮ ಫಲಕವನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.

error: Content is protected !!