ದಣಿದ ಮನಸ್ಸನ್ನು ತಣಿಸಲು ಮತ್ಸ್ಯ ಪ್ರದರ್ಶನಾಲಯ, ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ :ಪ್ರಾಣಿ ಪಕ್ಷಿಗಳ ಸಾಕುವಿಕೆಯಿಂದ ನಮ್ಮಲ್ಲಿನ ಮಾನಸಿಕ ಒತ್ತಡಗಳು‌ ದೂರವಾಗುತ್ತವೆ. ಹೀಗಾಗಿ ಹಲವಾರು ಕಾರ್ಪೋರೆಟ್
ಕಂಪೆನಿಗಳಲ್ಲಿ ಅಕ್ವೇರಿಯಂ ಇರುವುದನ್ನು ಗಮನಿದ್ದೇನೆ. ಮಾನಸಿಕ ಒತ್ತಡ ನಿವಾರಿಸಲು ಇದು ಸಹಕಾರಿ. ಸರಕಾರ  ನಗರ ಪ್ರದೇಶಗಳಲ್ಲಿ ಮತ್ಸ್ಯಗಾರವನ್ನು ಸ್ಥಾಪಿಸುವಂತೆ ಸಚಿವರಿಗೆ ಸಲಹೆ ನೀಡಿದರು.
ಕ್ಷೇತ್ರಕ್ಕೆ ಬಂದ ಭಕ್ತಾದಿಗಳ ಮನಸೋಲ್ಲಾಸಕ್ಕೆ ಲಲಿತೋದ್ಯಾನವನ್ನು ಕೀರ್ತಿ ಶೇಷ  ದಿ. ಮಂಜಯ್ಯ ಹೆಗ್ಗಡೆ ಪ್ರಾರಂಭಿಸಿದರು. ಇಲ್ಲಿ ದೇವರ ಕಟ್ಟೆ ಇದ್ದು ವರುಷಕ್ಕೆ ಎರಡು ಬಾರಿ ದೇವರ ಉತ್ಸವ ಮೂರ್ತಿ ಯ ಸವಾರಿ ನಡೆಯುತ್ತದೆ. ಲಲಿತೋದ್ಯಾನದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ದಣಿದ ಮನಸ್ಸನ್ನು ತಣಿಸಲು ಮತ್ಸ್ಯ ಪ್ರದರ್ಶನಾಲಯವೂ ಇದೆ. ಇದರ ವೀಕ್ಷಣೆಯಿಂದ  ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು  ಅವರು ಧರ್ಮಸ್ಥಳದ ಲಲಿತೋದ್ಯಾನದಲ್ಲಿ ಮತ್ಸ್ಯ ಪ್ರದರ್ಶನಾಲಯದ ಉದ್ಘಾಟನಾ  ಕಾರ್ಯಕ್ರಮದಲ್ಲಿ  ಮಾತನಾಡಿ
ಅಲಂಕಾರಿಕ‌‌ ಮೀನುಗಳನ್ನು‌ ಕೆರೆ, ನದಿ, ಸಮುದ್ರದಲ್ಲಿ ನೋಡಲು ಸಾಧ್ಯವಿಲ್ಲ. ಪ್ರೀತಿ, ಕಳಕಳಿ ಇದ್ದರೆ ಮನೆಯಲ್ಲೇ
ಮತ್ಸ್ಯ ಸಾಕುವ ಹವ್ಯಾಸ ಬೆಳೆಯಬೇಕು.ಮಂಜುನಾಥ ಸ್ವಾಮಿಯ ಕೃಪೆಯಿಂದ ಎಲ್ಲಾ ಕಷ್ಟಗಳು ದೂರವಾಗಲಿ  ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ  ಎಂದು ಶುಭ ಹಾರೈಸಿದರು.
ಆತ್ಮನಿರ್ಭರ ಯೋಜನೆಯಡಿಯಲ್ಲಿ ಮೀನುಗಾರಿಕೆಯಲ್ಲಿ ರಾಜ್ಯವು ಒಂದನೇ ಸ್ಥಾನಕ್ಕೆ ಬರುವಂತೆ ಪ್ರಯತ್ನಿಸಲಾಗುವುದು. ಯಾವುದೇ ಸಾಮಾಜಿಕ ಯೋಜನೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ
ಮಾದರಿಯಾಗಿದೆ. ಮೀನುಗಾರಿಕಾ ಇಲಾಖೆ ಹೊಸ  ಹೆಜ್ಜೆ ಇಟ್ಟಿದ್ದು ಇಂದಿನ ಕಾರ್ಯಕ್ರಮದಿಂದ  ಆತ್ಮವಿಶ್ವಾಸ ಇಮ್ಮಡಿಯಾಗಿದೆ
ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
 ಅವರು ಭಾನುವಾರ ಸಂಜೆ  ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತೋದ್ಯಾನದಲ್ಲಿನ ಮತ್ಸ್ಯ ಪ್ರದರ್ಶನಾಲಯದಲ್ಲಿ  ಅಲಂಕಾರಿಕ ಮೀನುಗಳನ್ನು‌ ಕೊಳಕ್ಕೆ ಬಿಡುವುದರ ಮೂಲಕ  ಉದ್ಘಾಟಿಸಿದರು.
ರಾಜ್ಯವು ದೇಶದಲ್ಲಿ ರಾಜ್ಯವು ಒಳನಾಡು ಮೀನುಗಾರಿಕೆಯಲ್ಲಿ 9 ನೇ ಸ್ಥಾನದಲ್ಲಿದ್ದು, ಕಡಲ ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿದೆ. ಇದನ್ನು ಆತ್ಮನಿರ್ಭರ ಯೋಜನೆಯಡಿಯಲ್ಲಿ ಒಂದನೇ ಸ್ಥಾನಕ್ಕೆ ಬರುವಂತಹ ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರು ಆತ್ಮ ನಿರ್ಭರ್ ಭಾರತದಡಿ 20 ಸಾವಿರ ಕೋಟಿ ರೂ. ಇಡೀ ದೇಶಕ್ಕೆ ನೀಡಿದ್ದು ಅದರಲ್ಲಿ 3.5 ಸಾವಿರ ಕೋ. ರೂ. ಕರ್ನಾಟಕಕ್ಕೆ ನೀಡಿದ್ದಾರೆ.  ಉಳ್ಳಾಲದಿಂದ ಕಾರವಾರದ ವರೆಗೆ ಸಮುದ್ರ ಕಿನಾರೆಯಲ್ಲಿ ಮತ್ಸ್ಯ ಸಂಪಾದನೆಗೆ ಆದ್ಯತೆ ನೀಡಲಾಗುವುದು.
ಕೇಂದ್ರ ಸರಕಾರವು ನೀಡಿದ 3.5 ಕೋಟಿ ರೂ.ಅನುದಾನದಲ್ಲಿ  ಸುಮಾರು 10 ಸಾವಿರ ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. ಈಗಾಗಲೇ ಮೀನಿನ‌‌ ಚಿಪ್ಸ್ ಗೆ ಭಾರೀ ಬೇಡಿಕೆಯಿರುವುದನ್ನು ವಿವರಿಸಿದರು.
ಸರಕಾರಗಳು‌ ಮಾಡುವ ಕೆಲಸಗಳನ್ನು ಶ್ರೀಕ್ಷೇತ್ರದ ಮೂಲಕ ಡಾ.ಹೆಗ್ಗಡೆಯವರು ಮಾಡುತ್ತಿದ್ದಾರೆ. ಸಮರ್ಪಣಾ ಮನೋಭಾವದಲ್ಲಿ‌ ಕೆಲಸ ಮಾಡುವ ಕೇಂದ್ರ ಶ್ರೀ‌ಕ್ಷೇತ್ರ ಧರ್ಮಸ್ಥಳ ಎಂದರು.
ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ , ಜಿ.ಪಂ.ಸಾ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತ ಶೆಟ್ಟಿ
ಇದ್ದರು.
 ಪ್ರದರ್ಶನಾಲಯಕ್ಕೆ   ಮತ್ಸ್ಯಗಳನ್ನು, ಅದಕ್ಕೆ ಬೇಕಾಗುವ ಆಹಾರವನ್ನು ಉಚಿತವಾಗಿ ಸರಬರಾಜು ಮಾಡಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಚೇತನ್ ಹಾಗೂ ಪ್ರದೀಪ್ ಮತ್ತು ಲಲಿತೋದ್ಯಾನದ ಮತ್ಸ್ಯಗಾರದ ಸಿಬ್ಬಂದಿ ಹಂಝ ಅವರನ್ನು ಡಾ.ಹೆಗ್ಗಡೆಯವರು ಮತ್ತು ಸಚಿವರು ಕ್ಷೇತ್ರದ ಪರವಾಗಿ ಸಮ್ಮಾನಿಸಿದರು.
 ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.   ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ   ಡಾ.ಬಿ.ಯಶೋವರ್ಮ ವಂದಿಸಿದರು. ಉಪನ್ಯಾಸಕ ದೀಕ್ಷಿತ್ ನಿರ್ವಹಿಸಿದರು

error: Content is protected !!