ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಂದ ಸಚಿವರಿಗೆ ಮನವಿ

ಬೆಳ್ತಂಗಡಿ: ತಾಲೂಕು ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆಯ ನೌಕರರ ನಿಯೋಗವು ಶನಿವಾರ ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹದಲ್ಲಿ ರಾಜ್ಯ ಸಹಕಾರ ಸಚಿವ ಸೋಮಶೇಖರ ಅವರನ್ನು ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
 ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರ ಸಮ್ಮುಖದಲ್ಲಿ
ಶನಿವಾರ ಧರ್ಮಸ್ಥಳ ಕ್ಕೆ ಆಗಮಿಸಿದ ಸಚಿವರಿಗೆ
ಬೇಡಿಕೆಯುಳ್ಳ ಮನವಿಯನ್ನು ಸಲ್ಲಿಸಿ, ಸರಕಾರದ ಗಮನ ಸೆಳೆಯುವಂತೆ ಸಚಿವರಲ್ಲಿ‌ ಮನವಿ ಮಾಡಿದರು.
ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್  ಸದನದಲ್ಲಿ ಚರ್ಚಿಸಿದ್ದು, ನಾಲ್ಕೈದು ದಿನದಲ್ಲಿ ಪರಿಹಾರ ದೊರಕಲಿದೆ ಎಂದು ಭರವಸೆ ನೀಡಿದರು.
ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಹೊರಗುತ್ತಿಗೆ
ನೌಕರರ ಸಂಘದ ಗೌರವಾಧ್ಯಕ್ಷರಾದ ಡಾ.ಸುಮನ ನಂದ ಕುಮಾರ್,  ಸಂಚಾಲಕರಾದ ಅಜಯ್  ಕಲ್ಲೇಗ, ಹರಿಣಿ ಬಿ.ಜಿ., ಜತೆ ಕಾರ್ಯದರ್ಶಿ ಮಾಹಂತೇಶ್, ಸದಸ್ಯರಾದ ಸೀತಾಲಕ್ಷ್ಮೀ, ಉಮೇಶ್, ಸೌಮ್ಯ, ಪ್ಲೋಸಿ ಲೋಬೋ, ಜಯಶ್ರೀ, ಭಾರತಿ, ಸುಲೋಚನ, ವಸಂತಿ, ಚೈತ್ರಾ, ಚಿನ್ನಮ್ಮ, ಗೀತಾ, ರಕ್ಷಾ , ಬಾಬು ಮೊದಲಾದವರು ಇದ್ದರು.

error: Content is protected !!