ಬೆಳ್ತಂಗಡಿ:ಸರ್ಕಾರಿ ಸಿಬ್ಬಂದಿಯೊಬ್ಬರು ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು ಬ್ಯಾನರ್ ನಲ್ಲಿ ತಮ್ಮ ಹೆಸರನ್ನು ಹಾಕಿರುವುದು ಕಂಡುಬಂದಿದೆ ಸರ್ಕಾರಿ ಅಧಿಕಾರಿಯೇ ಒಂದು ಪಕ್ಷದಲ್ಲಿ ಗುರುತಿಸಿಕೊಂಡರೆ ಜನರಿಗೆ ಯಾವ ರೀತಿಯಲ್ಲಿ ನ್ಯಾಯವನ್ನು ಅವರಲ್ಲಿ ನಿರೀಕ್ಷಿಸಬಹುದು. ಈ
ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿದ್ದು ಸರಿಯಾದ ತನಿಖೆ ನಡೆಸಬೇಕೆಂದು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ.ಗೌಡ ಹೇಳಿದರು ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ತಾಲೂಕಿನಲ್ಲಿ ಅಕ್ರಮ ಮರಳು ಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಗೊತ್ತಿದ್ದರು ಕೈಕಟ್ಟಿ ಕುಳಿತಿದ್ದಾರೆ.ಸಂಸದರಾದ ನಳಿನ್ ಕುಮಾರ್ ಕಟೀಲು ಎರಡು ಸಾವಿರ ರೂಪಾಯಿಗೆ ಮರಳನ್ನು ನೀಡುತ್ತೇವೆ ಎಂದು ಹೇಳುತ್ತಾರೆ ಅದರೆ ತಾಲೂಕಿನಲ್ಲಿ ಅಲ್ಲಲ್ಲಿ ಅಕ್ರಮವಾಗಿ ಹಿಟಾಚಿಗಳ ಮೂಲಕ ಮರಳು ತೆಗಯುವಂತಹ ಕೆಲಸ ನಡೆಯುತ್ತಿದೆ ಯಾವುದೇ ಕಾರಣಕ್ಕೂ ಯಂತ್ರವನ್ನು ಬಳಸಿ ಮರಳು ತೆಗೆಯುವುದಕ್ಕೆ ಅನುಮತಿ ಇಲ್ಲದಿದ್ದರೂ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಮರಳನ್ನು ತೆಗೆಯುವುಂತಹ ಕೆಲಸ ನಡೆಯುತ್ತಿದೆ .ಮರಳು ತೆಗೆಯುವವರು ರಾಜಕೀಯ ಪ್ರಭಾವಿಗಳಾಗಿರುವುದರಿಂದ ಯಾವುದೇ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಅದಲ್ಲದೆ ಅಕ್ರಮ ಮರಳುಗಾರಿಕೆ ಮಾಡುವವರಿಗೆ ಪೊಲೀಸರೇ ಬೆಂಬಲವಾಗಿ ನಿಂತಿದ್ದಾರೆ .ಪೊಲೀಸರು ಕೂಡ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ.ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಸಂಬಂಧ ಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಬಡವರಿಗೆ ಅನ್ಯಾಯವಾಗುತ್ತಿದೆ .ಈ ಬಗ್ಗೆ ತಾಲೂಕು ಕಚೇರಿಯಅಧಿಕಾರಿಗಳಲ್ಲಿ ಮಾತನಾಡಿದರೆ ಸರಿಯಾದ ಮಾಹಿತಿಗಳನ್ನು ನೀಡುತ್ತಿಲ್ಲ 94 ಸಿ ಹಕ್ಕು ಪತ್ರಗಳನ್ನು ಬಡವರಿಗೆ ನೀಡುತ್ತಿಲ್ಲ ಅದಷ್ಟು ಬೇಗ ಹಕ್ಕು ಪತ್ರ ನೀಡುವ ಕೆಲಸವನ್ನು ಮಾಡಬೇಕು ಮಾಡದೇ ಹೋದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಲ್ಲಿ ಪ್ರತಿಭಟನೆಯನ್ನು ಮಾಡಲಾಗುವುದು .ತಾಲೂಕಿನಲ್ಲಿ ಶಿಲಾನ್ಯಾಸದ ಹೆಸರಿನಲ್ಲಿ ತಾಲೂಕಿನಲ್ಲಿ ಪ್ಲೆಕ್ಸ್ ಗಳನ್ನು ಹಾಕಲಾಗುತ್ತಿದ್ದು ಈ ಬಗ್ಗೆ ಯಾವುದೇ ಪ್ಲೆಕ್ಸ್ ಗಳಿಗೆ ಅನುಮತಿಯನ್ನು ಅಯಾಯ ಪಂಚಾಯತ್ ಗಳಿಂದ ಪಡೆಯದೇ ಹಾಕಿರುವುದಾಗಿದೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅಂತಹ ಅಕ್ರಮ ಪ್ಲೆಕ್ಸ್ ಗಳನ್ನು ತೆರವು ಗೊಳಿಸಬೇಕು ಎಂದರು
ತಾಲೂಕಿನ ಹಲವೆಡೆ ಪ್ಲೆಕ್ಸ್ ಗಳಿಂದಾಗಿ ವಾಹನ ಸವಾರರಿಗೆ ಅನಾನುಕೂಲವಾಗುತ್ತಿದೆ.ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಹಾಕಿರುವುದರಿಂದ ಎದುರಿನಿಂದ ಬರುವಂತಹ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ .ಅದಲ್ಲದೆ ಗಾಳಿ ಬರುವಾಗ ಪ್ಲೆಕ್ಸ್ ಗಳು ಆಚೀಚೆ ವಾಲುವಂತದ್ದು ಅಗುವುದರಿಂದ ಬಹಳಷ್ಟು ತೊಂದರೆ ಆಗುತ್ತಿದೆ ಈ ಬಗ್ಗೆ ಪಟ್ಟವರು ಕ್ರಮ ಜರುಗಿಸಬೇಕು ಎಂದರು. ಮಾಜಿ ಎಪಿಎಂಸಿ ಅಧ್ಯಕ್ಷ ಕೇಶವ ಪಿ.ಬೆಳಾಲ್ ಹೇಳಿದರು.ಈ ಸಂದರ್ಭದಲ್ಲಿ .ಅಭಿನಂದನ್ ಹರೀಶ್ ಕುಮಾರ್ ,ದಯಾನಂದ ಬೆಳಾಲ್,ಪ್ರವೀಣ ವಿ.ಜಿ. ಉಪಸ್ಥಿತರಿದ್ದರು.