ರಾಜ್ಯ ಹೆದ್ದಾರಿ ದುರಸ್ತಿಗೆ ಚಾಲನೆ: ಶಾಸಕರಿಗೆ ಸಾರ್ವಜನಿಕರ ಅಭಿನಂದನೆ

 

ಬೆಳ್ತಂಗಡಿ: ಗುರುವಾಯನಕೆರೆ–ಶಕ್ತಿನಗರ–ವೇಣೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತೀವ್ರವಾಗಿ ಹಾನಿಗೊಳಗಾಗಿತ್ತು. ಹಲವೆಡೆ ಡಾಂಬರು ಕಿತ್ತುಹೋಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದರು.

ಸಾರ್ವಜನಿಕರ ಸಮಸ್ಯೆಯನ್ನು ಮನಗಂಡು ರಸ್ತೆ ದುರಸ್ತಿಗಾಗಿ ರೂ.25 ಲಕ್ಷ ಅನುದಾನ ಮೀಸಲಿಡಲಾಗಿದ್ದು, ಹಾನಿಗೊಳಗಾದ ರಸ್ತೆ ಭಾಗಗಳ ತುರ್ತು ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ.

ರಸ್ತೆಯ ಹದಗೆಟ್ಟ ಸ್ಥಿತಿಯನ್ನು ಗಮನಿಸಿ ತುರ್ತಾಗಿ ಸ್ಪಂದಿಸಿ ಅನುದಾನ ಒದಗಿಸಿದ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರಿಗೆ ಸ್ಥಳೀಯ ಸಾರ್ವಜನಿಕರು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!