
ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆಯಾಗುತಿದ್ದು, ತಾಲೂಕಿನ ನಾನ ಭಾಗಗಳಲ್ಲಿ ಗುಡ್ಡ ಕುಸಿತ ಸೇರಿದಂತೆ ಹಲವಾರು ಅನಾಹುತಗಳು ಸಂಭವಿಸಿದ್ದು, ಬೆಳ್ತಂಗಡಿ ಸವಣಾಲು ರಸ್ತೆಯ ಹೆರಾಜೆ ಎಂಬಲ್ಲಿ ರಸ್ರೆ ಬದಿ ಕುಸಿದಿದ್ದು, ಘನ ವಾಹನಗಳ ಸಂಚಾರ ಅಪಾಯಕಾರಿಯಾಗಿದೆ.

ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಚರಂಡಿ ಸಮಸ್ಯೆಯಿಂದಾಗಿ ರಸ್ತೆಯಲ್ಲೇ ನೀರು ಹರಿದ ಪರಿಣಾಮ ರಸ್ತೆ ಬದಿ ಕುಸಿತಗೊಂಡಿದೆ. ಎಂಬ ಮಾಹಿತಿಯನ್ನು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗಾಗಲೇ ಸವಣಾಲು, ಶಿರ್ಲಾಲು, ಬೈಲಡ್ಕ ಸೇರಿದಂತೆ ಈ ರಸ್ತೆಯಲ್ಲಿ ದಿನಿನಿತ್ಯ ಘನ ವಾಹನ ಸೇರಿದಂತೆ ನೂರಾರು ವಾಹನ ಸಂಚರಿಸುತಿದ್ದು ,ಅಪಾಯ ಸಂಭವಿಸುವ ಮೊದಲು ಅಧಿಕಾರಿಗಳು ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರಲ್ಲದೇ ಎಚ್ಚರಿಕೆ ಫಲಕ ಆಳವಡಿಸುವಂತೆ ಸೂಚಿಸಿದ್ದಾರೆ.