ಬೆಳ್ತಂಗಡಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ:ಲಾಯಿಲದಲ್ಲಿ 15 ಮನೆಗಳಿಗೆ ನುಗ್ಗಿದ ನದಿ ನೀರು ಹಲವರ ಸ್ಥಳಾಂತರ: ಊಟೋಪಾಚಾರದ ವ್ಯವಸ್ಥೆ ಮಾಡಿದ ಪಂಚಾಯತ್, ಸ್ಥಳೀಯರು:

 

 

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಶನಿವಾರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.‌ಕಣ್ಣು ಹಾಯಿಸಿದೆಲ್ಲೆಡೆ ನೀರು, ನದಿಗಳು ಉಕ್ಕಿ ಹರಿದ ಪರಿಣಾಮ ಮನೆ ಸೇರಿದಂತೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡು ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಯಿತು. ಲಾಯಿಲ ಗ್ರಾಮದಲ್ಲಿ ಹರಿಯುತ್ತಿರುವ ಸೋಮವತಿ ನದಿಯಲ್ಲಿ ಬಂದ ನೆರೆಯಿಂದ ಪುತ್ರಬೈಲು, ಗುರಿಂಗಾನ, ಹೊಳೆಬದಿ ಭಾಗದ  ಸುಮಾರು 15ಕ್ಕಿಂತಲೂ ಅಧಿಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಅತಂತ್ರ ಸ್ಥಿತಿಯಲ್ಲಿದ್ದ ವೇಳೆ  ಸ್ಥಳೀಯರು , ಜಾತಿ ಧರ್ಮ ಬೇಧ ಮರೆತು ಸಹಾಯಕ್ಕಾಗಿ ಧಾವಿಸಿ ಬಂದು ತಕ್ಷಣ ಸುಮಾರು 70ಕ್ಕಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಅಧಿಕಾರಿಗಳ ಮೂಲಕ ಮಾಡಿದ್ದಾರೆ.  ಸ್ಥಳೀಯವಾಗಿ ಕೆಲವರು   ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದು  .ಈ ವೇಳೆ ತೊಂದರೆಗೊಳಗಾದ ಕೆಲವು  ಮನೆಯವರಿಗೆ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ಮಾಜಿ ಗ್ರಾ.ಪಂ ಸದಸ್ಯೆ ರಜನಿ, ಗುತ್ತಿಗೆದಾರ ಸುಜಿತ್ ಗುರಿಂಗಾನ ಅವರ ಸಹಕಾರದಲ್ಲಿ ಊಟ ಸೇರಿದಂತೆ ನೀರು ಆಹಾರ ವ್ಯವಸ್ಥೆಯನ್ನು ಮಾಡಲಾಗಿದ್ದು. ಕಾರ್ಯಚರಣೆಯ ವೇಳೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ತಾರನಾಥ್ , ಲೆಕ್ಕ ಸಹಾಯಕಿ ಸುಪ್ರಿತಾ ಎಸ್ ಶೆಟ್ಟಿ, ಪಂಚಾಯತ್ ಮಾಜಿ ಸದಸ್ಯರುಗಳಾದ ದಿನೇಶ್ ಶೆಟ್ಟಿ, ಆಶಾಲತಾ,ರಜನಿ, ಸೇರಿದಂತೆ ಸ್ಥಳೀಯರು ಸಹಕರಿಸಿದರು. ಸ್ಥಳದಲ್ಲಿ ತಹಶೀಲ್ದಾರ್ ಎಸ್.ಎನ್ ನರಗುಂದ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್,ಗ್ರಾಮ ಆಡಳಿತಾಧಿಕಾರ  ರನಿತಾ, ಗ್ರಾಮ ಸಹಾಯಕ ಸತೀಶ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇವತ್ತು ಕೂಡ ಭಾರೀ ಮಳೆಯಾಗುತಿದ್ದು, ಜನರು ಮತ್ತಷ್ಟು ಅತಂಕ ಪಡುವ ಸ್ಥಿತಿ ವರುಣಾರ್ಭಟದಿಂದ ನಿರ್ಮಾಣವಾಗಿದೆ.ಈಗಾಗಲೇ ತಾಲೂಕಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ ಡಿ. ಆರ್ ಎಫ್ ) ಆಗಮಿಸಿದ್ದು ತುರ್ತು   ಕಾರ್ಯಚರಣೆಗೆ ಸನ್ನಧರಾಗಿದ್ದಾರೆ.

error: Content is protected !!