ಬೆಳ್ತಂಗಡಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು: ಹಲವಾರು ಮನೆಗಳು ಜಲಾವೃತ,ಸ್ಥಳಾಂತರ: ಎನ್ ಡಿ.ಆರ್.ಎಫ್ ತಂಡ ಆಗಮನ:

 

 

ಬೆಳ್ತಂಗಡಿ:ತಾಲೂಕಿನಾದ್ಯಂತ ಸತತವಾಗಿ ವಿಪರೀತ ಮಳೆ ಬೆಳಗ್ಗಿನಿಂದ ಸುರಿಯುತಿದ್ದು,ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ತಾಲೂಕಿನ ನಾನಾ ಭಾಗಗಳಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಲಾಯಿಲ ಗ್ರಾಮದ ಪುತ್ರಬೈಲು,ಗುರಿಂಗಾನ ಹೊಳೆಬದಿಯಲ್ಲಿ ಹಲವಾರು ಮನೆಗಳಿಗೆ ನದಿ ನೀರು ನುಗ್ಗಿದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಬೆಳ್ತಂಗಡಿ ಕಿಲ್ಲೂರು ರಸ್ತೆ ಸಂಚಾರಕ್ಕೆ ಕೆಲಹೊತ್ತು ಅಡಚಣೆ ಉಂಟಾಗಿದೆ. ಹಾನಿಯಾದ ಮನೆಗಳಿಗೆ ಸ್ಥಳೀಯರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ತೊಂದರೆಗೊಳಗಾದ ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ
ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುತಿದ್ದು ಪ್ರವಾಹದ ಭೀತಿ ಉಂಟಾಗಿದೆ , ಎನ್ ಡಿ‌ ಆರ್ ಎಫ್ ತಂಡ ಈಗಾಗಲೇ ತಾಲೂಕಿಗೆ ಆಗಮಿಸಿದೆ ಧರ್ಮಸ್ಥಳದಲ್ಲಿ ಮಣ್ಣಸಂಕ ಎಂಬಲ್ಲಿ ರಸ್ತೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮುಂಡಾಜೆ ಧರ್ಮಸ್ಥಳ ರಸ್ತೆ ಬದಿ ಕುಸಿತಗೊಂಡು ಸಂಚಾರ ಸ್ಥಗಿತಗೊಂಡಿದೆ. ಸವಣಾಲು ರಸ್ತೆಯ ಹೆರಾಜೆ ಎಂಬಲ್ಲಿ ರಸ್ತೆ ಬದಿ ಕುಸಿತಗೊಂಡಿದೆ. ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮವತಿ ಸೇರಿದಂತೆ ತಾಲೂಕಿನಲ್ಲಿ ಹರಿಯುತ್ತಿರುವ ನದಿಗಳ ನೀರಿನ ಮಟ್ಟ ವಿಪರೀತ ಏರಿಕೆಯಾಗಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ. ಸಂಜೆಯಾದರೂ ಮಳೆ ಕಡಿಮೆಯಾಗದಿರುವುದು ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

error: Content is protected !!