
ಬೆಳ್ತಂಗಡಿ:ಗ್ರಾಮ ಪಂಚಾಯತ್ ಬಳಿಯೇ ಸಡಕ್ ರಸ್ತೆಯ ಬದಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಜನರಿಗೆ ,ಶಾಲಾ ಮಕ್ಕಳಿಗೆ ಸೇರಿದಂತೆ ವಾಹನ ನಿಲುಗಡೆಗೂ ಜಾಗ ಇಲ್ಲದೆ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು ಮೌನವಾಗಿರುವುದರ ಹಿಂದಿನ ಉದ್ದೇಶಗಳೇನು.ಹಾಗಾದರೆ ಬಡವರಿಗೊಂದು ಕಾನೂನು ದೊಡ್ಡವರಿಗೊಂದು ಕಾನೂನೇ , ಗ್ರಾಮದ ಸಮಸ್ಯೆಗಳ ಬಗ್ಗೆ ಪಂಚಾಯತ್ ನಲ್ಲಿ ಧ್ವನಿ ಎತ್ತಿದರೆ ಎಲ್ಲೆಲ್ಲಿಂದ ಪೋನ್ ಕರೆಗಳು ಬರಲಾರಂಭಿಸುತ್ತದೆ.ನಾವು ನ್ಯಾಯದ ಪರವಾಗಿ ಪ್ರಶ್ನೆ ಮಾಡುವಂತದ್ದು ಯಾರಿಗೂ ಅನ್ಯಾಯವಾಗಬಾರದು, ನ್ಯಾಯಯುತ ಬೇಡಿಕೆ ನಮ್ಮ ಆಗ್ರಹ ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ತಪ್ಪು ಮಾಡಿದರೆ ಅಧಿಕಾರಿಗಳನ್ನು ಬಿಡುವುದಿಲ್ಲ ಎಂದು ಸುರೇಶ್ ಬೈರ ಆಸಾಮಾಧಾನ ಹೊರಹಾಕಿದ ಘಟನೆ ಜು 22 ರಂದು ಲಾಯಿಲ ಗ್ರಾಮ ಪಂಚಾಯತಿಯಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆಗಳ ವಿಶೇಷ ಗ್ರಾಮ ಸಭೆಯಲ್ಲಿ ನಡೆದಿದೆ. ತಾಲೂಕು ಕೇಂದ್ರಕ್ಕೆ ತಾಗಿಕೊಂಡಿರುವ ಲಾಯಿಲ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ಹಂಚಲು ಜಾಗದ ಸಮಸ್ಯೆ, ಅದರೆ ದುಡ್ಡು ಇದ್ದವರು ಬಲಾಡ್ಯರು ಏನೂ ಮಾಡಿದರೂ ಯಾರೂ ಕೇಳುವುದಿಲ್ಲ, ಅರ್ಜಿ ನೀಡಿದ ಬಡವರು ನಿವೇಶನ ಸಿಗದೇ ಒದ್ದಾಟ ನಡೆಸುತಿದ್ದಾರೆ. ಪಂಚಾಯತ್ ಗೆ ಅಲೆದಾಟ ಮಾಡಿ ರೋಸಿ ಹೋಗಿದ್ದಾರೆ. ಅದರಲ್ಲೂ ದಲಿತರಿಗೆ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನರು ಆಕ್ರೋಶಭರಿತಾಗಿ ಹೋರಾಟ ನಡೆಸಿದರೆ ಅದಕ್ಕೆ ನೀವೆ ಹೊಣೆಯಾಗುತ್ತೀರಿ. ಗ್ರಾಮದಲ್ಲಿ ಅತೀ ಹೆಚ್ಚು ದಲಿತ ಕುಟುಂಬಗಳಿರುವ ಪುತ್ರಬೈಲು ಬಳಿ ಸಮುದಾಯ ಭವನ ದುರಸ್ತಿಯಾಗದೇ ಬೀಳುವ ಸ್ಥಿತಿಯಲ್ಲಿದೆ.
ಅದರ ದುರಸ್ತಿಗಾಗಿ ಹಲವಾರು ಮನವಿಗಳನ್ನು ವಿವಿಧ ಇಲಾಖೆಗಳಿಗೆ ನೀಡಿದರೂ ಸ್ಪಂದನೆ ಇಲ್ಲ , ತಕ್ಷಣ ಕ್ರಮಕೈಗೊಳ್ಳಬೇಕು ಅದರ ಪಕ್ಕದಲ್ಲೇ ಇರುವ ಸರ್ಕಾರಿ ಜಾಗವನ್ನು ಸಮುದಾಯ ಭವನ ವಿಸ್ತರಿಸಲು ಮೀಸಲಿರಿಸಬೇಕು ಎಂದು ಆಗ್ರಹಿಸಿದರು.