ಉತ್ತಮ ಗುಣಮಟ್ಟದ ಸೇವೆ ಜನರಿಗೆ ಸಿಗುವಂತಾಗಲಿ, ಶಾಸಕ ಹರೀಶ್ ಪೂಂಜ: ಗುರುವಾಯನಕೆರೆಯಲ್ಲಿ ಶ್ರೀ ಕೃಷ್ಣ ಫ್ಯಾಮಿಲಿ ರೆಸ್ಟೋರೆಂಟ್, ಸುಧಾಮ ಗಾರ್ಡನ್ ಶುಭಾರಂಭ:

 

 

ಬೆಳ್ತಂಗಡಿ: ಶುಚಿ ರುಚಿಯಾದ ಉತ್ತಮ ಗುಣಮಟ್ಟದ ಆಹಾರ ನಗುಮೊಗದ ಸೇವೆ , ಗ್ರಾಹಕರಿಗೆ ದೊರಕಿದರೆ ಇಂತಹ ಉದ್ಯಮಗಳು ಮತ್ತಷ್ಟು ಯಶಸ್ವಿಯಾಗಿ ಬೆಳೆಯಲು ಸಾಧ್ಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಗುರುವಾಯನಕೆರೆಯಲ್ಲಿ ಶ್ರೀ ಕೃಷ್ಣ ಪ್ಯಾಮಿಲಿ ರೆಸ್ಟೋರೆಂಟ್ ಹಾಗೂ ಸುಧಾಮ ಗಾರ್ಡನ್ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಈಗಾಗಲೇ ಉಜಿರೆ ಭಾಗದಲ್ಲಿ ಉತ್ತಮ ಗುಣಮಟ್ಟದ ಹೋಟೇಲ್ ನಲ್ಲಿ ಮಧ್ಯಮ ವರ್ಗದ ಜನರು ಆಹಾರ ಸೇವಿಸಬೇಕು ಎಂಬ ನಿಟ್ಟಿನಲ್ಲಿ ಬೆಳ್ತಂಗಡಿಯ ಯಶಸ್ವಿ ಉದ್ಯಮಿಗಳಾದ ಶಶಿಧರ್ ಶೆಟ್ಟಿಯವರು ಕಾಶಿ ಪ್ಯಾಲೇಸ್  ಮೂಲಕ ಆರಂಭಿಸಿ ಅತ್ಯುತ್ತಮ ಆಹಾರ ಜನರಿಗೆ ಸಿಗುವಂತೆ ಮಾಡಿದ್ದಾರೆ. ಅದೇ ರೀತಿ ಗುರುವಾಯನಕೆರೆ ಸೇರಿದಂತೆ ಈ ಭಾಗದಲ್ಲೂ ಎಲ್ಲ ಸೌಕರ್ಯಗಳನ್ನೊಳಗೊಂಡ ಉತ್ತಮ ಗುಣಮಟ್ಟದ ಪ್ಯಾಮಿಲಿ ರೆಸ್ಟೋರೆಂಟ್ ಒಂದರ ಅವಶ್ಯಕತೆ ಇತ್ತು. ಅದನ್ನು ಇವತ್ತು ಉದ್ಯಮಿಗಳಾದ ದಿನೇಶ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿಯವರು ಪ್ರಾರಂಭಿಸಿರುವುದು ಸಂತಸ ತಂದಿದೆ. ಈ ಮೂಲಕ ತಾಲೂಕಿನ ಜನರಿಗೆ, ಸ್ಥಳೀಯರಿಗೆ ಹಾಗೂ ಬರುವಂತಹ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ನಗುಮೊಗದ ಸೇವೆ ಸದಾ ಸಿಗಲಿ ಉದ್ಯಮವು ಯಶಸ್ವಿಯಾಗಲಿ ಎಂದರು.

 

 

 

 

ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ,ದೀಪ ಬೆಳಗಿಸಿ ಜನರ ಅವಶ್ಯಕತೆಯನ್ನರಿತು ಪ್ರಾರಂಭಿಸಿದ ಈ ಹೊಟೇಲ್ ಉದ್ಯಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ವಿಧಾನ ಪರಿಷತ್ ಮಾಜಿ ಶಾಸಕ ಪ್ರತಾಪ್ ಸಿಂಹ ನಾಯಕ್,ಬಂಟರ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ,ಶಿವಪ್ರಸಾದ ಅಜಿಲ, ಪ್ರಕಾಶ್ ಶೆಟ್ಟಿ ನೊಚ್ಛ, ಇನ್ನಿತರ ಗಣ್ಯರು ಶುಭ ಹಾರೈಸಿದರು.

 

 

 

 

ಕಾರ್ಯಕ್ರಮದಲ್ಲಿ ಬಂದಂತಹ ಅತಿಥಿಗಳನ್ನು ದಿನೇಶ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.ಉದ್ಯಮಿಗಳು, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೇಯ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!